ADVERTISEMENT

ಫ್ಯಾಕ್ಟ್‌ಚೆಕ್: ಮುಸ್ಲಿಂ ಯುವಕ ಹಿಂದೂ ಯುವತಿಗೆ ಮತ್ತು ಬರುವ ಔಷಧಿ ನೀಡಿದನೇ?

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 19:45 IST
Last Updated 27 ಅಕ್ಟೋಬರ್ 2021, 19:45 IST
   

ರೆಸ್ಟೋರೆಂಟ್ ಒಂದರಲ್ಲಿ ಯುವಕನೊಬ್ಬ ತನ್ನ ಗೆಳತಿಯ ಸಾಫ್ಟ್‌ಡ್ರಿಂಕ್‌ ಟಿನ್‌ಗೆ ಏನ್ನನೋ ಬೆರಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ನೋಡಿ ಎಚ್ಚರದಿಂದ ಇರಿ. ಯಾರನ್ನೂ ಏಕಾಏಕಿ ನಂಬಬೇಡಿ. ಈ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ವಂಚಿಸುವ ಉದ್ದೇಶದಿಂದ ತಂಪು ಪಾನೀಯಕ್ಕೆ ಮಾದಕವಸ್ತು ಬೆರೆಸುತ್ತಿದ್ದಾನೆ. ಅದನ್ನು ಗಮನಿಸಿದ ಕ್ಯಾಷಿಯರ್, ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಹೀಗೆ ವಂಚಿಸುವ ಕೃತ್ಯಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಬೇಕು’ ಎಂದು ಕರೆ ನೀಡಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆದರೆ ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಈ ವಿಡಿಯೊಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಹುಡುಕಲಾಯಿತು.ಈ ವಿಡಿಯೊವನ್ನು ಹಂಸ ನಂದಿನಿ ಎಂಬ ನಟಿ ಮತ್ತು ಮಾಡೆಲ್‌ನ ಫೇಸ್‌ಬುಕ್ ಪುಟದಲ್ಲಿ ಮೊದಲ ಬಾರಿ 2020ರ ಅಕ್ಟೋಬರ್‌ 18ರಂದು ಪೋಸ್ಟ್‌ ಮಾಡಲಾಗಿದೆ. ಯಾರನ್ನೂ ಏಕಾಏಕಿ ನಂಬಬೇಡಿ ಎಂಬ ಸಂದೇಶ ಇರುವ ಕಿರುಚಿತ್ರವೊಂದನ್ನು ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಲಾಗಿದೆ. ಇದೇ ಕಿರುಚಿತ್ರದ ಬೇರೆ ದೃಶ್ಯಗಳನ್ನೂ ಹಂಸ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಜತೆಗೆ, ಕಿರುಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯೂ ಮೂಲ ವಿಡಿಯೊದಲ್ಲಿ ಇದೆ. ಆದರೆ ಆ ವಿವರಗಳನ್ನು ತೆಗೆದು ಹಾಕಿ, ಹಿಂದೂ-ಮುಸ್ಲಿಂ ನಡುವೆ ದ್ವೇಷ ಹುಟ್ಟಿಸುವ ಉದ್ದೇಶದಿಂದ ಈ ವಿಡಿಯೊ ತಿರುಚಲಾಗಿದೆ’ ಎಂದು ಲಾಜಿಕಲ್ ಇಂಡಿಯನ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT