ಕೇಂದ್ರ ಸರ್ಕಾರವು ಉದ್ಯೋಗ ನೇಮಕಾತಿಯನ್ನು ಚುರುಕುಗೊಳಿಸಿದೆ. ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಅಡಿಯಲ್ಲಿ ಕಿಸಾನ್ ವಿಕಾಸ್ ಮಿತ್ರ ಸಮಿತಿ (ಕೆವಿಎಂಎಸ್)ಕಾರ್ಯ ನಿರ್ವಹಿಸುತ್ತಿದೆ. ಸಮಿತಿಯು ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಆಕಾಂಕ್ಷಿಗಳು ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಕುರಿತ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೆಬ್‌ಸೈಟ್‌ನ ಅಸಲಿತನವನ್ನು ಪಿಐಬಿ ಫ್ಯಾಕ್ಟ್ ಚೆಕ್ ಘಟಕಪರಾಮರ್ಶೆ ನಡೆಸಿದೆ. ಆದರೆ ಈ ಹೆಸರಿನ ಯಾವುದೇ ಸಮಿತಿಯು ಕೃಷಿ ಇಲಾಖೆಗೆ ಸಂಬಂಧಪಟ್ಟಿಲ್ಲ ಹಾಗೂ ನೇಮಕಾತಿ ಕುರಿತಂತೆ ಹರಡುತ್ತಿರುವ ಸಂದೇಶ ಸುಳ್ಳು ಎಂಬುದು ದೃಢಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.