ADVERTISEMENT

ಫ್ಯಾಕ್ಟ್‌ಚೆಕ್: ಕಾರಾಗಿರಿ ಲವ್‌ ಜಿಹಾದ್ ಉತ್ತೇಜಿಸುತ್ತಿದೆ ಎಂಬ ಆರೋಪ ನಿಜವೇ?

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 19:30 IST
Last Updated 5 ಏಪ್ರಿಲ್ 2022, 19:30 IST
ವೈರಲ್ ಆಗಿರುವ ಚಿತ್ರ
ವೈರಲ್ ಆಗಿರುವ ಚಿತ್ರ   

‘ಪುಣೆಯ ಕೈಮಗ್ಗ ಸೀರೆ ಬ್ರ್ಯಾಂಡ್‌ ಕಾರಾಗಿರಿ, ಲವ್‌ ಜಿಹಾದ್ ಅನ್ನು ಉತ್ತೇಜಿಸುತ್ತಿದೆ. ಹಿಂದೂ ಮಹಿಳೆಯ ಸೀಮಂತ ಕಾರ್ಯಕ್ರಮದಲ್ಲಿ ಆಕೆಯ ಮುಸ್ಲಿಂ ಗಂಡ ಇರುವ ಚಿತ್ರವನ್ನು ಜಾಹೀರಾತಿಗಾಗಿ ಕಾರಾಗಿರಿ ಬಳಸುತ್ತಿದೆ. ಆತ ಮುಸ್ಲಿಮರು ಧರಿಸುವ ಟೋಪಿ ಧರಿಸಿದ್ದಾನೆ. ಈ ಬ್ರ್ಯಾಂಡ್‌ ಅನ್ನು ಹಿಂದೂಗಳು ಬಹಿಷ್ಕರಿಸಬೇಕು’ ಎಂಬ ವಿವರ ಇರುವ ಟ್ವೀಟ್‌ಗಳು ವೈರಲ್ ಆಗಿವೆ. ಇನ್‌ಸ್ಟಾಗ್ರಾಂನಲ್ಲಿ ಕಾರಾಗಿರಿ ಬ್ರ್ಯಾಂಡ್‌ ಪ್ರಕಟಿಸಿದ್ದ ಚಿತ್ರ ಸಹ ಈ ಟ್ವೀಟ್‌ಗಳ ಜತೆಗೆ ವೈರಲ್ ಆಗಿವೆ. ಈ ಬ್ರ್ಯಾಂಡ್‌ನ ಸೀರೆಗಳನ್ನು ಬಹಿಷ್ಕರಿಸಿ ಎಂದು ಹಲವರು ಕರೆ ನೀಡಿದ್ದಾರೆ. ಹಲವು ಕನ್ನಡಿಗರೂ ಈ ಬಹಿಷ್ಕಾರಕ್ಕೆ ದನಿಗೂಡಿಸಿದ್ದಾರೆ.

‘ಇದು ಸುಳ್ಳು ಸುದ್ದಿ. ತಪ್ಪು ಮಾಹಿತಿ ಮತ್ತು ತಿರುಚಲಾದ ಚಿತ್ರದೊಂದಿಗೆ ಪ್ರಚೋದನಕಾರಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ದಿ ಲಾಜಿಕಲ್ ಇಂಡಿಯನ್, ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಕಾರಾಗಿರಿ ಕಂಪನಿಯು ಈ ಚಿತ್ರದ ಜತೆಗೆ ಬೇರೆ ಚಿತ್ರಗಳನ್ನೂ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. ವೈರಲ್ ಆಗಿರುವ ಚಿತ್ರದ ಜತೆಯಲ್ಲಿ, ಮತ್ತೊಂದು ಚಿತ್ರವೂ ಇದೆ. ಅದರಲ್ಲಿ ಪುರುಷ, ಮರಾಠಿ ಜನರು ಧರಿಸುವ ಟೋಪಿ ಧರಿಸಿದ್ದಾನೆ. ಅದು ಮುಸ್ಲಿಮರು ಧರಿಸುವ ಟೋಪಿ ಅಲ್ಲ’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT