ADVERTISEMENT

ಫ್ಯಾಕ್ಟ್‌ಚೆಕ್‌; ಜೆ ಆ್ಯಂಡ್‌ ಕೆ ಎಂಬ ವಿದ್ಯಾರ್ಥಿ ನಿಲಯದ ಚಿತ್ರಗಳು..

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 19:30 IST
Last Updated 24 ಏಪ್ರಿಲ್ 2022, 19:30 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಜೆ ಆ್ಯಂಡ್‌ ಕೆ ಎಂಬ ವಿದ್ಯಾರ್ಥಿ ನಿಲಯದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ವಿದ್ಯಾರ್ಥಿ ನಿಲಯವು ಜೆಎನ್‌ಯುನಲ್ಲಿ ವ್ಯಾಸಂಗ ಮಾಡುತ್ತಿರುವಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗಾಗಿ ಈ ಹಿಂದಿನ ಕಾಂಗ್ರೆಸ್‌ ಸರ್ಕಾರವು 2012ರಲ್ಲಿ ನಿರ್ಮಿಸಿದೆ. ಈ ವಿದ್ಯಾರ್ಥಿನಿಲಯದಲ್ಲಿ 400 ಕೊಠಡಿಗಳಿವೆ. ಆದರೆ ಇದರಲ್ಲಿ ಹಿಂದೂ ಸೇರಿ ಇತರ ಯಾವುದೇ ಧರ್ಮದ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ. ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳು ಇಲ್ಲಿ ಉಚಿತವಾಗಿ ಪ್ರವೇಶ ಪಡೆಯುತ್ತಾರೆ. ನಮ್ಮ ತೆರಿಗೆ ಹಣದಲ್ಲಿ ಅವರು ಉಚಿತ ಸವಲತ್ತುಗಳನ್ನು ಪಡೆಯುತ್ತಾರೆ ಎಂದು ವಿಡಿಯೊ ಜೊತೆ ಮಾಹಿತಿ ಹಂಚಲಾಗಿದೆ.

ಚಿತ್ರದ ಜೊತೆ ಹಂಚಲಾಗಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ವರದಿ ಮಾಡಿದೆ. ವೈರಲ್‌ ಆಗಿರುವ ಚಿತ್ರವು ಜಾಮಿಯಾ ಮಿಲಿಯ ಇಸ್ಲಾಮಿಯಾ ವಿಶ್ವವಿದ್ಯಾನಿಯಲದ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ನಿಲಯ. ಇಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿನಿಯರು ಪೂರ್ಣಾವಧಿ ಕೋರ್ಸುಗಳ ವ್ಯಾಸಂಗ ಮಾಡುತ್ತಿರಬೇಕು. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಪೋಷಕರು ಅಥವಾ ಗಂಡ ವಾಸಿಸುತ್ತಿದ್ದರೆ ಅಂಥ ಅಭ್ಯರ್ಥಿಗಳಿಗೆ ಅವಕಾಶವಿಲ್ಲ ಎಂದು ವಿದ್ಯಾರ್ಥಿನಿಲಯದ ಕೈಪಿಡಿಯಲ್ಲಿ ನಮೂದಿಸಲಾಗಿದೆ. ಧರ್ಮದ ಆಧಾರದಲ್ಲಿ ಇಲ್ಲಿ ಪ್ರವೇಶ ನೀಡಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT