ADVERTISEMENT

Fact Check: ಪರೇಡ್‌ ವೇಳೆ ಸೇನಾ ಸಿಬ್ಬಂದಿ ಬೈಕ್‌ ಅಪಘಾತಕ್ಕೀಡಾಗಿಲ್ಲ

ಫ್ಯಾಕ್ಟ್ ಚೆಕ್
Published 29 ಜನವರಿ 2026, 23:35 IST
Last Updated 29 ಜನವರಿ 2026, 23:35 IST
.
.   

ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆದ ಸೇನಾ ಪರೇಡ್‌ನಲ್ಲಿ ಸೇನಾ ಸಿಬ್ಬಂದಿ ಬೈಕ್‌ ಸಾಹಸಗಳನ್ನು ಪ್ರದರ್ಶಿಸುತ್ತಿರುವಾಗ ಬೈಕ್‌ಗಳು ಅಪಘಾತಕ್ಕೀಡಾಗುವ ವಿಡಿಯೊ ತುಣುಕನ್ನು ‘ಎಕ್ಸ್‌’ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿ ಸೇನೆಯನ್ನು ಅಣಕವಾಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ. 

77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್‌ನ ಸಂಪೂರ್ಣ ವಿಡಿಯೊ ಮೈಗವ್‌ ಇಂಡಿಯಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿದ್ದು, ಪೋಸ್ಟ್‌ನಲ್ಲಿ ಹೇಳಿರುವಂತೆ ಬೈಕ್‌ ಸಾಹಸ ಪ್ರದರ್ಶನದ ವೇಳೆ ಅಪಘಾತದ ಸಂಭವಿಸಿರುವ ದೃಶ್ಯ ಇಲ್ಲ. ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಡಿದಾಗಲೂ ಯಾವುದೇ ವಿಶ್ವಾಸಾರ್ಹ ಸುದ್ದಿಗಳು ಸಿಗಲಿಲ್ಲ. ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ ಅನುಮಾನ ಬಂತು. ಇದರ ಆಧಾರದಲ್ಲಿ ಎಐ ಪತ್ತೆ ಟೂಲ್‌ ಹೈವ್‌ ಮಾಡರೇಷನ್‌ ಮೂಲಕ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದು ಎಐ ಮೂಲಕ ಸೃಷ್ಟಿಸಿದ ವಿಡಿಯೊ ಎಂಬುದು ದೃಢಪಟ್ಟಿತು.  ಡೀಪ್‌ಫೇಕ್‌ ಒ–ಮೀಟರ್‌ ಎಂಬ ಮತ್ತೊಂದು ಟೂಲ್‌ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅದು ಎಐ ಸೃಷ್ಟಿ ವಿಡಿಯೊ ಎಂಬುದು ಖಾತ್ರಿಯಾಯಿತು ಎಂದು ಬೂಮ್‌ ಫ್ಯಾಕ್ಟ್‌ ಚೆಕ್‌ ವರದಿ ಪ್ರಕಟಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT