ADVERTISEMENT

ಅಂಗವಿಕಲ ಮಗುವಿನೊಂದಿಗೆ ಸಿ.ಎಂ ‘ಓಣಂ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ತಿರುವನಂತಪುರ (ಐಎಎನ್‌ಎಸ್‌):  ಕೇರಳದ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರು ಅಂಗವಿಕಲ ಮಗುವಿ ನೊಂದಿಗೆ  ಸೋಮವಾರ ‘ಓಣಂ’ ಹಬ್ಬ ಆಚರಿಸಿದರು.

ಚಾಂಡಿ ಅವರು ಈ ಬಾರಿ ಹಬ್ಬ ಆಚರಿಸಲು ತಮ್ಮ ಸ್ವಕ್ಷೇತ್ರ ಕೊಟ್ಟಾಯಂಗೆ ರೈಲಿನಲ್ಲೇ ಪ್ರಯಾಣ ಬೆಳೆಸಿದ್ದು ವಿಶೇಷ.
ತಮ್ಮ ಬೆಂಗಾವಲು ಪಡೆಯ ಸಿಬ್ಬಂದಿ ಕೂಡಾ ಹಬ್ಬದ ಆಚರಣೆ ಯಲ್ಲಿ ತಮ್ಮ ತಮ್ಮ ಕುಟುಂಬದೊಂದಿಗೆ ಪಾಲ್ಗೊಳ್ಳಲಿ ಎಂಬ ಕಾರಣಕ್ಕಾಗಿ ಉಮ್ಮನ್‌ ಚಾಂಡಿ ರೈಲಿನಲ್ಲಿ ಕೊಟ್ಟಾಯಂಗೆ ಪ್ರಯಾಣಿಸಿದರು.  ಈ ಬಾರಿ ಅಂಗವಿಕಲ ಮಗುವಿನ ಜತೆ ಉಮ್ಮನ್ ಚಾಂಡಿ ಓಣಂ ಆಚರಿಸಿದರು ಎಂದು ಮುಖ್ಯಮಂತ್ರಿ ಅವರ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಕೇರಳದ ಪ್ರತಿಪಕ್ಷ ನಾಯಕ ವಿ.ಎಸ್‌. ಅಚ್ಯುತಾನಂದನ್ ಅವರು ತಮ್ಮ ಕುಟುಂಬದೊಂದಿಗೆ ಓಣಂ ಆಚರಿಸಿದರು.
ಕೇರಳದಾದ್ಯಂತ ಸೋಮವಾರ ಸಡಗರ–ಸಂಭ್ರಮದಿಂದ ‘ಓಣಂ’ ಹಬ್ಬವನ್ನು ಆಚರಿಸಲಾಯಿತು.

‘ಓಣಂ ಸಧ್ಯಾ’ ಎಂಬ ಸಾಂಪ್ರದಾ ಯಿಕ ಆಚರಣೆ ಮೂಲಕ ಹಬ್ಬದ ಸಡಗರವನ್ನು ಸವಿದ ಜನರು, ಮಣ್ಣಿನ ಮಡಕೆಗಳಲ್ಲಿ 26 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ತಯಾರಿ ಸುವ ಮೂಲಕ ಹಬ್ಬಕ್ಕೆ ಮೆರುಗು ತಂದರು.

ಬದಲಾಗುತ್ತಿದೆ ಓಣಂ ಪರಿಪಾಠ: ಸಂಪ್ರದಾಯ ಮತ್ತು ಪರಂಪರೆಯ ದ್ಯೋತಕವಾಗಿರುವ ‘ಓಣಂ’  ಹಬ್ಬದ ಆಚರಣೆ ಇತ್ತೀಚೆಗೆ ಕೇರಳದಲ್ಲಿ ಕಡಿಮೆ ಯಾಗುತ್ತಿದೆ.

ಹಬ್ಬದ ದಿನದಂದು ಸಿಗುವ ರಜೆಯಲ್ಲಿ ಬಹುತೇಕರು ತಮ್ಮ ಕುಟುಂಬ ದೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪರಿಪಾಠ ಬೆಳೆಸಿ ಕೊಳ್ಳುತ್ತಿದ್ದಾರೆ.

ಈ ಪರಿಪಾಠಕ್ಕೆ ಇಂಬುಗೊಡುವಂತೆ ಕೊಟ್ಟಾಯಂನ ಶ್ರೀಕುಮಾರಿ ಅಮ್ಮ  ಕೂಡಾ ತಮ್ಮ ಅಭಿಪ್ರಾಯ ಮಂಡಿಸು ವುದು ಹೀಗೆ... ‘ಕಳೆದ ಆರು ದಶಕಗ ಳಿಂದ ನಮ್ಮ ಮನೆಯಲ್ಲಿ ಸಡಗರ –ಸಂಭ್ರಮದಿಂದ ಓಣಂ ಹಬ್ಬ ಆಚರಿಸು ತ್ತಿದ್ದೆವು. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾವು ಈ ಬಾರಿಯ ಓಣಂ ಸಧ್ಯಾ ಸಮಯದಲ್ಲಿ ಮನೆಯಲ್ಲಿ ಹಬ್ಬವನ್ನು ಆಚರಿಸದೇ ಯಾವುದಾ ದರೂ ಹೋಟೆಲ್‌ಗೆ ಹೋಗಿ ತಿನ್ನಲು ನಿರ್ಧರಿಸಿದೆವು’ ಎನ್ನುತ್ತಾರೆ ಅವರು.

ಹಬ್ಬದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ದ ಸರ್ಕಾರಿ ನೌಕರರಿಗೆ ಮುಂಗಡ ವಾಗಿ ಸಂಬಳ ಪಾವತಿಸಿದ್ದರಿಂದ ನೌಕರ ರು ಹಬ್ಬವನ್ನು ಸಡಗರದಿಂದ ಆಚರಿಸಿ ದರು. ಈ ಬಾರಿ ರೂಪಾಯಿ ಮೌಲ್ಯ ಕುಸಿದಿದ್ದರಿಂದ ಹಬ್ಬದ ಸಂಭ್ರಮ ಸ್ವಲ್ಪ ಕಡಿಮೆಯಾಗಿದೆ  ಎನ್ನುತ್ತಾರೆ
ಕೊಚ್ಚಿಯ ಅಂಗಡಿಯೊಂದರ ಮಾಲೀಕ ಕುಮಾರ್‌ನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.