ನವದೆಹಲಿ: ಸಹಾಯಧನ ಸಹಿತ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ಗೆ ₹4.50 ಹೆಚ್ಚಳಗೊಂಡಿದೆ. ಇದರಿಂದ ಪ್ರತಿ ಸಿಲಿಂಡರ್ ದರ ₹495.69ಕ್ಕೆ ಏರಿಕೆಯಾಗಿದೆ.
ಸಹಾಯಧನ ರಹಿತ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ಗೆ ₹93 ಹೆಚ್ಚಳಗೊಂಡಿದ್ದು, ₹742ಕ್ಕೆ ತಲುಪಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಇಂಧನ ದರವನ್ನು ಶೇ 2ರಷ್ಟು ಹೆಚ್ಚಿಸಲಾಗಿದೆ. ಆಗಸ್ಟ್ ನಂತರದಲ್ಲಿ ಇಂಧನ ದರ ಹೆಚ್ಚಿರುವುದು ಇದು ನಾಲ್ಕನೇ ಬಾರಿಯಾಗಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.
2016ರ ಜುಲೈ ನಿಂದ ಇಲ್ಲಿಯವರೆಗೂ 19 ಬಾರಿ ದರ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.