ADVERTISEMENT

ಅಧ್ಯಾತ್ಮಿಕ ಗುರು ಬಯ್ಯೂಜಿ ಮಹಾರಾಜ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಏಜೆನ್ಸೀಸ್
Published 12 ಜೂನ್ 2018, 18:45 IST
Last Updated 12 ಜೂನ್ 2018, 18:45 IST
ಬಯ್ಯೂಜಿ ಮಹಾರಾಜ್‌ ಚಿತ್ರ: ಎಎನ್‌ಐ ಟ್ವೀಟ್
ಬಯ್ಯೂಜಿ ಮಹಾರಾಜ್‌ ಚಿತ್ರ: ಎಎನ್‌ಐ ಟ್ವೀಟ್   

ನವದೆಹಲಿ: ಸ್ವಯಂ ಘೋಷಿತ ಅಧ್ಯಾತ್ಮಿಕ ಗುರು ಬಯ್ಯೂಜಿ ಮಹಾರಾಜ್‌ ಮಂಗಳವಾರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜನಪ್ರಿಯತೆ ಪಡೆದಿದ್ದ ಅವರಿಗೆ ಮಧ್ಯಪ್ರದೇಶ ಸರ್ಕಾರ ಈಚೆಗೆ ಸಚಿವ ಸ್ಥಾನಮಾನ ನೀಡಿ ಗೌರವಿಸಿತ್ತು.

ವರದಿಗಳ ಪ್ರಕಾರ ಬಯ್ಯೂಜಿ ಮಹಾರಾಜ್‌ರ ಹುಟ್ಟು ಹೆಸರು ಉದಯ್ ಸಿಂಗ್‌ ದೇಶ್ಮುಖ್‌. ಆಂತರಿಕ ಸಮಸ್ಯೆಗಳಿಂದಾಗಿ ಇಂದೋರ್‌ನ ಆಶ್ರಮದಲ್ಲಿ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಸ್ಥಳದಲ್ಲಿ ಡೆತ್‌ನೋಟ್‌ ಲಭ್ಯವಾಗಿದ್ದು, 50 ವರ್ಷ ವಯಸ್ಸಿನ ಅವರು ಖಿನ್ನತೆಗೆ ಒಳಗಾಗಿದ್ದರು. ಅವರು ಇಂದೋರ್‌ನ ಬಾಂಬೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಬಯ್ಯೂಜಿ ಮಹಾರಾಜ್‌ ಅವರನ್ನು ಆಸ್ಪತ್ರೆಗೆ ತರಲಾಗಿತ್ತು. ತನಿಖೆ ಬಳಿಕ ಅವರು ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆಂದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಜಯಂತ್‌ ರಾಥೋರ್‌ ತಿಳಿಸಿದ್ದಾರೆ.

ಸ್ವಯಂ ಘೋಷಿತ ಶೈಲಿಯ ಗುರುವಾಗಿದ್ದ ಅವರು ಪ್ರಭಾವಿ ರಾಜಕಾರಣಿಗಳು ಮತ್ತು ವ್ಯಾಪಾರಿಗಳೊಂದಿಗಿನ ಅವರ ಸಂಬಂಧಗಳೊಂದಿಗೆ ಹೆಸರುವಾಸಿಯಾಗಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇದ್ರ ಪಡಣವೀಸ್‌ ಮತ್ತು ಗಾಯಕಿ ಲತಾ ಮಂಗೇಶ್ಕರ್‌ ಅವರು ಇವರ ಅನುಯಾಯಿಗಳಾಗಿದ್ದರು ಎನ್ನಲಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಜನಪ್ರಿಯರಾಗಿದ್ದರು ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.