ಭುವನೇಶ್ವರ (ಪಿಟಿಐ): ಅಪಘಾತದಲ್ಲಿ ಧ್ವನಿ ಕಳೆದುಕೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ರೋಗಿ ಇಲ್ಲಿಯ ಕಳಿಂಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ) ವೈದ್ಯರು ನಡೆಸಿದ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಮರಳಿ ಧ್ವನಿ ಪಡೆದಿದ್ದಾನೆ.
ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಒಡಿಶಾದ ನಯಾಗಡ ಜಿಲ್ಲೆಯ 40 ವರ್ಷದ ಬಿಜಯ್ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ವೈದ್ಯರು ಗಂಟಲಿನಲ್ಲಿ ಅಳವಡಿಸಿದ್ದ ಕೃತಕ ರಂಧ್ರದ ಮೂಲಕ ಉಸಿರಾಡುತ್ತಿದ್ದರಿಂದ ಧ್ವನಿ ಉಡುಗಿ ಹೋಗಿತ್ತು. ಭಾನುವಾರ ನಡೆದ ಅಪರೂಪದ ಶಸ್ತ್ರಚಿಕಿತ್ಸೆಯ ನಂತರ ಬಿಜಯ್‌ಗೆ ಮರಳಿ ಮಾತನಾಡುವ ಶಕ್ತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.