ADVERTISEMENT

ಅಮರ್‌, ಜಯಪ್ರದ ಲೋಕದಳ ಪಕ್ಷಕ್ಕೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 10:08 IST
Last Updated 10 ಮಾರ್ಚ್ 2014, 10:08 IST

ನವದೆಹಲಿ (ಪಿಟಿಐ):  ಸಮಾಜವಾದಿ ಪಕ್ಷದ ಮಾಜಿ ನಾಯಕರಾದ ಅಮರ್‌ ಸಿಂಗ್‌ ಮತ್ತು ಜನಪ್ರಿಯ ಚಿತ್ರ ನಟಿ ಜಯಪ್ರದ ಸೋಮವಾರ ಅಧಿಕೃತವಾಗಿ ರಾಷ್ಟ್ರೀಯ ಲೋಕದಳ ಪಕ್ಷವನ್ನು ಸೇರಿದರು.

ಲೋಕದಳದ ವರಿಷ್ಠ ಅಜಿತ್‌ ಸಿಂಗ್‌ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಅಮರ್‌ ಸಿಂಗ್‌ ತಿಳಿಸಿದರು.

ನಾನು ಫತೇಪುರ್‌ ಕ್ಷೇತ್ರದಿಂದ, ಜಯಪ್ರದ ಬಿಜ್ನೋರ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಭಿವೃದ್ಧಿಗೆ ಪೂರಕವಾದ ಆಡಳಿತ ನಡೆಸುತ್ತಿಲ್ಲ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT