ADVERTISEMENT

ಅಯೋಧ್ಯೆಯಿಂದ ದೂರ ಮಸೀದಿ ನಿರ್ಮಾಣವಾಗಲಿ: ಶಿಯಾ ವಕ್ಫ್‌ ಮಂಡಳಿ

ಪಿಟಿಐ
Published 8 ಆಗಸ್ಟ್ 2017, 19:30 IST
Last Updated 8 ಆಗಸ್ಟ್ 2017, 19:30 IST
ಅಯೋಧ್ಯೆಯಿಂದ ದೂರ ಮಸೀದಿ ನಿರ್ಮಾಣವಾಗಲಿ: ಶಿಯಾ ವಕ್ಫ್‌ ಮಂಡಳಿ
ಅಯೋಧ್ಯೆಯಿಂದ ದೂರ ಮಸೀದಿ ನಿರ್ಮಾಣವಾಗಲಿ: ಶಿಯಾ ವಕ್ಫ್‌ ಮಂಡಳಿ   

ನವದೆಹಲಿ: ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ವಿವಾದಕ್ಕೆ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್‌ ಮಂಡಳಿಯು ಪರಿಹಾರವೊಂದನ್ನು ಸೂಚಿಸಿದೆ. ವಿವಾದಾತ್ಮಕ ನಿವೇಶನದಿಂದ ದೂರದಲ್ಲಿ, ಮುಸ್ಲಿಮರು ಹೆಚ್ಚಾಗಿ ಇರುವ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸುವ ಮೂಲಕ ವಿವಾದವನ್ನು ಪರಿಹರಿಸಬಹುದು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಮಂಡಳಿ ಹೇಳಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂಬ ವಿವಿಧ ಹಿಂದೂ ಸಂಘಟನೆಗಳ ಬೇಡಿಕೆಗೆ ಈ ಮೂಲಕ ಮುಸ್ಲಿಂ ಸಂಘಟನೆಯೊಂದು ಬೆಂಬಲ ವ್ಯಕ್ತಪಡಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿ, ಸ್ವಲ್ಪ ದೂರದಲ್ಲಿ ಮಸೀದಿ ನಿರ್ಮಾಣ ಮಾಡಬಹುದು ಎಂಬ ಸಲಹೆಯನ್ನು ಹಿಂದೂ ಸಂಘಟನೆಗಳು ಹಿಂದೆಯೇ ನೀಡಿದ್ದವು.

ಶಿಯಾ ವಕ್ಫ್‌ ಮಂಡಳಿಯ ಅಧ್ಯಕ್ಷ ಸಯ್ಯದ್‌ ವಸೀಮ್‌ ರಿಜ್ವಿ ಅವರು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸುನ್ನಿ ವಕ್ಫ್‌ ಮಂಡಳಿಯ ವಾದವನ್ನು ತಿರಸ್ಕರಿಸಿರುವ ಶಿಯಾ ಮಂಡಳಿ, ಬಾಬರಿ ಮಸೀದಿ ಇದ್ದ ನಿವೇಶನ ತನಗೆ ಸೇರಿದ್ದು ಎಂದು ಹೇಳಿದೆ. ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕಿದ್ದರೆ ತನ್ನ ಜತೆಗೆ ಮಾತ್ರ ಮಾತುಕತೆ ನಡೆಸಬೇಕು ಎಂದೂ ವಾದಿಸಿದೆ.

ADVERTISEMENT

ಮಂದಿರ ಮತ್ತು ಮಸೀದಿ ಒಂದೇ ಸ್ಥಳದಲ್ಲಿ  ನಿರ್ಮಾಣ ಆಗದಂತೆ ನೋಡಿಕೊಳ್ಳಬೇಕು. ಮಂದಿರ ಮತ್ತು ಮಸೀದಿಯಲ್ಲಿ ಬಳಸಲಾಗುವ ಧ್ವನಿವರ್ಧಕಗಳು ಪರಿಸ್ಪರರಿಗೆ ಕಿರಿಕಿರಿ ಉಂಟು ಮಾಡಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ವಿವಾದಾತ್ಮಕ ಪ್ರಕರಣದ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತ್ವರಿತ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದ ಕೆಲವೇ ದಿನಗಳಲ್ಲಿ ವಕ್ಫ್‌ ಮಂಡಳಿ ಈ ಪ್ರಮಾಣ ಪತ್ರ ಸಲ್ಲಿಸಿರುವುದು ಮಹತ್ವ ಪಡೆದುಕೊಂಡಿದೆ.

ವಿವಾದಕ್ಕೆ ಸೌಹಾರ್ದಯುತವಾದ ಯಾವ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ಪರಿಶೀಲಿಸಲು ಸ್ವಲ್ಪ ಸಮಯ ಕೊಡುವಂತೆ ಸುಪ್ರೀಂ ಕೋರ್ಟ್‌ ಅನ್ನು ಮಂಡಳಿ ಕೋರಿದೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ತ್ವರಿತ ವಿಚಾರಣೆ ನಡೆಸಬೇಕು ಎಂದು ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.  ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರಿದ್ದ ಪೀಠವು, ಬಾಕಿ ಇರುವ ಅರ್ಜಿಗಳನ್ನು ಬೇಗನೆ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಜುಲೈ 21ರಂದು ಹೇಳಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಕಳೆದ ಏಳು ವರ್ಷಗಳಿಂದ ವಿಚಾರಣೆಗೆ ಬಾಕಿ ಇವೆ ಎಂದು ಅರ್ಜಿಯಲ್ಲಿ ಸ್ವಾಮಿ ಹೇಳಿದ್ದರು. ವಿವಾದಾತ್ಮಕ ನಿವೇಶನದಲ್ಲಿ ತಮಗೆ ಪೂಜೆ ಸಲ್ಲಿಸಲು ಅವಕಾಶ ಇರಬೇಕು ಎಂದು ಅವರು ಕೋರಿದ್ದರು.

ವಿವಾದಾತ್ಮಕ ಪ್ರಕರಣದ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತ್ವರಿತ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದ ಕೆಲವೇ ದಿನಗಳಲ್ಲಿ ವಕ್ಫ್‌ ಮಂಡಳಿ ಈ ಪ್ರಮಾಣ ಪತ್ರ ಸಲ್ಲಿಸಿರುವುದು ಮಹತ್ವ ಪಡೆದುಕೊಂಡಿದೆ.

ವಿವಾದಕ್ಕೆ ಸೌಹಾರ್ದಯುತವಾದ ಯಾವ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ಪರಿಶೀಲಿಸಲು ಸ್ವಲ್ಪ ಸಮಯ ಕೊಡುವಂತೆ ಸುಪ್ರೀಂ ಕೋರ್ಟ್‌ ಅನ್ನು ಮಂಡಳಿ ಕೋರಿದೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ತ್ವರಿತ ವಿಚಾರಣೆ ನಡೆಸಬೇಕು ಎಂದುಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿಸಲ್ಲಿಸಿದ್ದರು.  ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರಿದ್ದ ಪೀಠವು, ಬಾಕಿ ಇರುವ ಅರ್ಜಿಗಳನ್ನು ಬೇಗನೆ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಜುಲೈ 21ರಂದು ಹೇಳಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಕಳೆದ ಏಳು ವರ್ಷಗಳಿಂದ ವಿಚಾರಣೆಗೆ ಬಾಕಿಇವೆ ಎಂದು ಅರ್ಜಿಯಲ್ಲಿ ಸ್ವಾಮಿ ಹೇಳಿದ್ದರು. ವಿವಾದಾತ್ಮಕನಿವೇಶನದಲ್ಲಿ ತಮಗೆ ಪೂಜೆ ಸಲ್ಲಿಸಲು ಅವಕಾಶ ಇರಬೇಕು ಎಂದು ಅವರು ಕೋರಿದ್ದರು.

ಲಖನೌ ಪೀಠದ ಆದೇಶ

ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದಾತ್ಮಕ ನಿವೇಶವನ್ನು ನಿರ್ಮೋಹಿ ಅಖಾಡ, ಸುನ್ನಿ ವಕ್ಫ್‌ ಮಂಡಳಿ ಮತ್ತು ರಾಮಲಲ್ಲಾ ನಡುವೆ ಸಮನಾಗಿ ಹಂಚಿಕೆ ಮಾಡಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ಆದೇಶ ನೀಡಿತ್ತು. ಈ ನಿವೇಶನ 2.77 ಎಕರೆಯಷ್ಟಿದೆ.

ಹೊಸ ತಿರುವು

ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ 2010ರಲ್ಲಿ ಅಯೋಧ್ಯೆ ಪ್ರಕರಣದ ತೀರ್ಪು ನೀಡಿತ್ತು

* ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿ ಸಲ್ಲಿಕೆಯಾಗಿದೆ

* ಈ ಅರ್ಜಿಗಳ ವಿಚಾರಣೆಗೆ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ಅಶೋಕ್‌ ಭೂಷಣ್‌ ಮತ್ತು ಎಸ್‌.ಎ. ನಜೀರ್‌ ಅವರ ಪೀಠವನ್ನು ರಚಿಸಲಾಗಿದೆ

* ಇದೇ 11ರಿಂದ ವಿಚಾರಣೆ ಆರಂಭವಾಗಲಿದೆ

* ಶಿಯಾ ವಕ್ಫ್‌ ಮಂಡಳಿಯ ಅರ್ಜಿಯೂ ಸುಪ‍್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ

* ಮಂಡಳಿ 30 ಪುಟಗಳ ಪ್ರಮಾಣಪತ್ರ ಸಲ್ಲಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.