ADVERTISEMENT

ಆರ್‌ಎಲ್‌ಡಿ ಸಂಸದ ಎಸ್‌ಪಿಗೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಲಖನೌ (ಪಿಟಿಐ): ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆಗೆ  ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಪಕ್ಷಕ್ಕೆ ಆಘಾತವಾಗಿದೆ.

ಆರ್‌ಎಲ್‌ಡಿಯ ರಾಜ್ಯಸಭಾ ಸದಸ್ಯ ಶಾಹಿದ್ ಸಿದ್ದಿಕಿ ಮತ್ತು ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಅವರ ಮಾಜಿ ಆಪ್ತ ಸಹಾಯಕಿ ಅನುರಾಧ ಚೌಧರಿ  ಭಾನುವಾರ ಸಮಾಜವಾದಿ ಪಕ್ಷ  (ಎಸ್‌ಪಿ) ಸೇರಿದ್ದಾರೆ.

ಈ ಇಬ್ಬರು ಮುಖಂಡರು ಮತ್ತು ಶಾಸಕ ವಿಮಲೇಶ್ ಸಿಂಗ್ ಅವರು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಎಸ್‌ಪಿಗೆ ಸೇರ್ಪಡೆಗೊಂಡರು. ಆ ನಂತರ, ಆರ್‌ಎಲ್‌ಡಿ ಮುಖ್ತಸ್ಥರ  ವಿರುದ್ಧ ವಾಗ್ದಾಳಿ ನಡೆಸಿದ ಅನುರಾಧ ಚೌಧರಿ, ಅಜಿತ್ ಸಿಂಗ್ ಅವರ ತಂದೆ ಚೌಧರಿ ಚರಣ್ ಸಿಂಗ್ ಅವರು ರೈತರ ಹಿತಾಸಕ್ತಿಗಳಿಗಾಗಿ ಕಾಂಗ್ರೆಸ್ ವಿರುದ್ಧ ಹೋರಾಡಿದ್ದರು.

ADVERTISEMENT

ನೂತನ ಡಿಜಿಪಿ

ಚುನಾವಣಾ ಆಯೋಗದ ಆದೇಶದ ಮೇರೆಗೆ ವರ್ಗಾವಣೆಗೊಂಡ ಡಿಜಿಪಿ ಬ್ರಿಜ್ ಲಾಲ್ ಅವರ ಸ್ಥಾನಕ್ಕೆ ನೇಮಕಗೊಂಡಿರುವ ಅತುಲ್ ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.