ADVERTISEMENT

‘ಇತಿಹಾಸ: ಉತ್ಪ್ರೇಕ್ಷೆ ತೆಗೆಯುವುದು ಅವಶ್ಯ’

ಪಿಟಿಐ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST

ನವದೆಹಲಿ: ಇತಿಹಾಸದಲ್ಲಿರುವ ‘ಉತ್ಪ್ರೇಕ್ಷೆ’ಗಳನ್ನು ಕಾಲಕಾಲಕ್ಕೆ ತೆಗೆದು ಹಾಕುವ ಅಗತ್ಯವಿದೆ’ ಎಂದು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ (ಐಸಿಎಚ್‌ಆರ್‌) ಅಧ್ಯಕ್ಷ ಅರವಿಂದ ಜಮಖೇಡ್ಕರ್‌ ಹೇಳಿದರು.

ಇತಿಹಾಸವನ್ನು ಪುನಃ ಬರೆಯವ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಇತಿಹಾಸ ಹೀಗೇ ಇರಬೇಕು ಎಂದು ಐಸಿಎಚ್‌ಆರ್‌ ನಿರ್ದೇಶಿಸುವುದಿಲ್ಲ. ಆದರೆ, ಇತಿಹಾಸವನ್ನು ಪುನಃ ಬರೆಯಲು ಹಾಗೂ ಸಂಶೋಧನೆಗೆ ಉತ್ತೇಜನ ನೀಡುತ್ತದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.