ನವದೆಹಲಿ(ಪಿಟಿಐ): ದೆಹಲಿ ಸಾಮೂ ಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳ ಗಲ್ಲು ಶಿಕ್ಷೆಗೆ ಸುಪ್ರೀಂಕೋರ್ಟ್ ಮಾರ್ಚ್ 31 ರವರೆಗೆ ತಡೆ ನೀಡಿದೆ.
2012ರ ಡಿಸೆಂಬರ್ 16ರಂದು ಚಲಿಸುತ್ತಿದ್ದ ಬಸ್‌ನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮುಕೇಶ್ (27), ಪವನ್ ಗುಪ್ತಾ (20), ಅಕ್ಷಯ್ ಠಾಕೂರ್ (29) ಹಾಗೂ ವಿನಯ್ ಶರ್ಮಾಗೆ (21) ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿತ್ತು. ಎರಡು ದಿನಗಳ ಹಿಂದೆಯಷ್ಟೇ ದೆಹಲಿ ಹೈಕೋರ್ಟ್ ಇದನ್ನು ಎತ್ತಿಹಿಡಿದಿತ್ತು.
ಹೈಕೋರ್ಟ್‌್ ಆದೇಶವನ್ನು ಪ್ರಶ್ನಿಸಿ ಮುಖೇಶ್‌್ ಹಾಗೂ ಪವನ್‌್ ಶನಿವಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ರಂಜನಾ ಪ್ರಕಾಶ್ ದೇಸಾಯಿ ಮತ್ತು ಶಿವ ಕೀರ್ತಿಸಿಂಗ್್ ಅವರನ್ನು ಒಳಗೊಂಡ ಪೀಠ ‘ಮುಖೇಶ್ ಹಾಗೂ ಪವನ್ ಗಲ್ಲು ಶಿಕ್ಷೆಗೆ ಮಾ.31 ರವರೆಗೆ ತಡೆ ನೀಡಲಾಗಿದೆ’ ಎಂದು ಹೇಳಿದೆ.
ಮುಕೇಶ್‌್ ಹಾಗೂ ಪವನ್‌್ ಪರವಾಗಿ ವಕೀಲ ಎಂ.ಎಲ್.ಶರ್ಮಾ ಮೇಲ್ಮನವಿ ಸಲ್ಲಿಸಿದ್ದರು. ‘ವಿಚಾರಣೆ ನ್ಯಾಯಸಮ್ಮತವಾಗಿ ನಡೆದಿಲ್ಲ. ವಾಸ್ತವ ಸಂಗತಿಗೆ ವ್ಯತಿರಿಕ್ತವಾಗಿ ಕಟ್ಟುಕತೆಯನ್ನು ಒಪ್ಪಿಕೊಳ್ಳುವಂತೆ ಕಿರುಕುಳ ನೀಡಲಾಗಿತ್ತು’ ಎಂದು ಮುಕೇಶ್‌್ ಹಾಗೂ ಪವನ್‌್ ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.