ADVERTISEMENT

ಇಸ್ರೊ: ಡಿಸೆಂಬರ್‌ನಲ್ಲಿ ಉಪಗ್ರಹ ಉಡಾವಣೆ

ಪಿಟಿಐ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಇಸ್ರೊ: ಡಿಸೆಂಬರ್‌ನಲ್ಲಿ ಉಪಗ್ರಹ ಉಡಾವಣೆ
ಇಸ್ರೊ: ಡಿಸೆಂಬರ್‌ನಲ್ಲಿ ಉಪಗ್ರಹ ಉಡಾವಣೆ   

ಹೈದರಾಬಾದ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಡಿಸೆಂಬರ್‌ನಲ್ಲಿ ಪಿಎಸ್ಎಲ್‌ವಿ ರಾಕೆಟ್‌ ಮೂಲಕ ಕಾರ್ಟೊಸ್ಯಾಟ್‌–2 ಸರಣಿಯ ಉಪಗ್ರಹವನ್ನು ಉಡಾವಣೆ ಮಾಡಲಿದೆ.

ಒಂದೂವರೆ ತಿಂಗಳ ಹಿಂದೆ ಉಪಗ್ರಹವೊಂದನ್ನು ಕಕ್ಷೆಗೆ ಸೇರಿಸಲು ವಿಫಲವಾದ ಬಳಿಕ ಇಸ್ರೊ ನಡೆಸುತ್ತಿರುವ ಮೊದಲ ಉಡಾವಣೆ ಇದು.

ಡಿಸೆಂಬರ್‌ನಲ್ಲಿ ಉಡಾವಣೆ ಮಾಡಲಿರುವುದು ಕಾರ್ಟೊಸ್ಯಾಟ್‌–2 ಸರಣಿಯ ಮೂರನೇ ಉಪಗ್ರಹವಾಗಲಿದೆ ಎಂದು ಇಸ್ರೊ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವರ್ಷದ ಫೆಬ್ರುವರಿಯಲ್ಲಿ ಪಿಎಸ್‌ಎಲ್‌ವಿ–ಸಿ37 ರಾಕೆಟ್‌ ಮೂಲಕ ಕಾರ್ಟೊಸ್ಯಾಟ್‌–2 ಸರಣಿಯ ಮೊದಲ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಉಪಗ್ರಹದೊಂದಿಗೆ ಇತರ 103 ಪುಟ್ಟ ಉಪಗ್ರಹಗಳನ್ನೂ ಕಳುಹಿಸಲಾಗಿತ್ತು.

ADVERTISEMENT

ಜೂನ್‌ ತಿಂಗಳಲ್ಲಿ 30 ಉಪಗ್ರಹಗಳೊಂದಿಗೆ ಕಾರ್ಟೊಸ್ಯಾಟ್‌–2 ಸರಣಿಯ ಎರಡನೇ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.

ಆದರೆ, ಆಗಸ್ಟ್‌ 31ರಂದು ಪಿಎಸ್‌ಎಲ್‌ವಿ–ಸಿ39 ರಾಕೆಟ್‌ ಮೂಲಕ ಐಆರ್‌ಎನ್‌ಎಸ್‌ಎಸ್‌–1ಎಚ್‌ ಪಥದರ್ಶಕ ಉಪಗ್ರಹದ ಉಡಾವಣಾ ಯತ್ನ ಯಶಸ್ಸಾಗಿರಲಿಲ್ಲ. ಇದರಿಂದ ಇಸ್ರೊಗೆ ಭಾರಿ ಹಿನ್ನಡೆಯಾಗಿತ್ತು.

‘ಡಿಸೆಂಬರ್‌ ತಿಂಗಳ ಮಧ್ಯಭಾಗದಲ್ಲಿ ಕಾರ್ಟೊಸ್ಯಾಟ್‌–2 ಸರಣಿಯ ಮೂರನೇ ಉಪಗ್ರಹವನ್ನು ಇತರೆ 15ರಿಂದ 20ರಷ್ಟು ವಿದೇಶಿ ನ್ಯಾನೊ ಉಪಗ್ರಹಗಳೊಂದಿಗೆ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದ್ದೇವೆ’ ಎಂದು ಇಸ್ರೊದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.