ADVERTISEMENT

ಉಗ್ರ ಸಂಘಟನೆ ಸೇರಿದ ಪಿಎಚ್‌.ಡಿ, ಎಂಬಿಎ ಪದವೀಧರರು

ಪಿಟಿಐ
Published 3 ಮೇ 2018, 19:56 IST
Last Updated 3 ಮೇ 2018, 19:56 IST

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಭಯೋತ್ಪಾದಕ ಸಂಘಟನೆಗಳಿಗೆ 45 ಯುವಕರು  ಸೇರಿದ್ದಾರೆ. ಹೀಗೆ ಸೇರಿದವರಲ್ಲಿ ಪಿಎಚ್.ಡಿ, ಎಂಬಿಎ ಪದವೀಧರರು ಇದ್ದಾರೆ.

ಈ ವರ್ಷದ ಏಪ್ರಿಲ್‌ ಮಧ್ಯದವರೆಗೆ ಇಷ್ಟೊಂದು ಸಂಖ್ಯೆಯಲ್ಲಿ ಯುವಕರು ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಕುಪ್ವಾರದ ಮನ್ನನ್‌ ಬಷೀರ್‌ ವಾನಿ, ಕಾಶ್ಮೀರ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿರುವ 26ರ ಹರೆಯದ ಜುನೈದ್ ಅಶ್ರಫ್ ಸೆಹ್ರಾ ಈ ವರ್ಷ ಉಗ್ರ ಸಂಘಟನೆ ಸೇರಿರುವ ಉನ್ನತ ಶಿಕ್ಷಣ ಪಡೆದ ಯುವಕರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.