ADVERTISEMENT

ಉತ್ತರಪ್ರದೇಶ: ವ್ಯಾನ್ –ಟ್ರಕ್‌ ಡಿಕ್ಕಿ– 9 ಮಂದಿ ಸಾವು

ಏಜೆನ್ಸೀಸ್
Published 28 ಏಪ್ರಿಲ್ 2018, 7:19 IST
Last Updated 28 ಏಪ್ರಿಲ್ 2018, 7:19 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಉತ್ತರಪ್ರದೇಶ: ಇಲ್ಲಿನ ಲಕ್ಕಿಮ್‌ಪುರ ಖೇರಿ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ವ್ಯಾನ್ – ಟ್ರಕ್‌ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. 

ಕೆಲಸ ನಿಮಿತ್ತ 17 ಮಂದಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಬೆಳಿಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಟಾ ಮ್ಯಾಜಿಕ್‌ ವ್ಯಾನ್‌ ಚಾಲಕ ಅನೂಪ್‌ ಅವಸ್ಥಿ (25), ಕ್ಲಿನರ್‌ ಕೀಶನ್‌ (23) ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಘಟನೆಗೆ ವೇಗದ ಚಾಲನೆಯೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.