ADVERTISEMENT

ಉತ್ತರಾಖಂಡದಲ್ಲಿ ಮಳೆಗೆ ಕೊಚ್ಚಿಹೋದ ವಾಹನಗಳು: ಇಬ್ಬರ ರಕ್ಷಣೆ

ಏಜೆನ್ಸೀಸ್
Published 15 ಜೂನ್ 2018, 6:48 IST
Last Updated 15 ಜೂನ್ 2018, 6:48 IST
ನದಿಯಲ್ಲಿ ಕೊಚ್ಚಿಹೋಗಿ ಪಲ್ಟಿಯಾಗಿ, ಮಣ್ಣಿನಲ್ಲಿ ಸಿಲುಕಿರುವ ಕಾರು. ಚಿತ್ರ: ಎಎನ್‌ಐ ಟ್ವೀಟ್
ನದಿಯಲ್ಲಿ ಕೊಚ್ಚಿಹೋಗಿ ಪಲ್ಟಿಯಾಗಿ, ಮಣ್ಣಿನಲ್ಲಿ ಸಿಲುಕಿರುವ ಕಾರು. ಚಿತ್ರ: ಎಎನ್‌ಐ ಟ್ವೀಟ್   

ಡೆಹರಾಡೂನ್‌: ಉತ್ತರಾಕಾಂಡದ ಕೆಲವೆಡೆ ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ಅಪಾಯದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ.

ಶಿವಪುರಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಹೆವೆಲ್‌ ನದಿಯ ನೀರಿಮಟ್ಟ ಹೆಚ್ಚಿದೆ. ನೀರಿನ ಹರಿವಿಗೆ ಒಂದು ಕಾರು, ಒಂದು ಬೈಕ್‌ ಕೊಚ್ಚಿ ಹೋಗಿವೆ. ಸಂಕಷ್ಟದಲ್ಲಿ ಸಿಲುಕಿದ್ದ ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ ಎಂದು ಶುಕ್ರವಾರ ಎಎನ್‌ಐ ಟ್ವೀಟ್‌ ಮಾಡಿದೆ.

ನದಿಯ ನೀರಿನಮಟ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿನ ಶಿಬಿರಗಳನ್ನು ಅಲ್ಲಿಂದ ತೆರವು ಮಾಡಲಾಗಿದೆ.

ADVERTISEMENT

ಡೆಹರಾಡೂನ್ ತೆಹ್ರಿ, ಪುರಿ ಮತ್ತು ನೈನಿತಾಲ್‌ ಜಿಲ್ಲೆಗಳಲ್ಲಿ ಇಂದಿನಿಂದ(ಮೇ 15) 17ರ ವರೆಗೆ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.