ADVERTISEMENT

ಉತ್ತರ ಪ್ರದೇಶದಲ್ಲಿ ಮತ್ತೆ ದೂಳು ಬಿರುಗಾಳಿ: 15 ಮಂದಿ ಸಾವು

9ಕ್ಕೂ ಹೆಚ್ಚು ಜನರಿಗೆ ಗಾಯ

ಏಜೆನ್ಸೀಸ್
Published 2 ಜೂನ್ 2018, 9:53 IST
Last Updated 2 ಜೂನ್ 2018, 9:53 IST
ಗುರುಗ್ರಾಮದಲ್ಲಿ ದೂಳು ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ನಡೆದರು
ಗುರುಗ್ರಾಮದಲ್ಲಿ ದೂಳು ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ನಡೆದರು   

ಲಖನೌ: ಉತ್ತರ ಪ್ರದೇಶದಲ್ಲಿ ಶುಕ್ರವಾರ ಬೀಸಿದ ದೂಳು ಬಿರುಗಾಳಿಗೆ ಸಿಲುಕಿ 15 ಮಂದಿ ಬಲಿಯಾಗಿದ್ದು, ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಿರುಗಾಳಿಯಿಂದಾಗಿ ಉರುಳಿ ಬಿದ್ದ ಮರಗಳು ಹಾಗೂ ಮನೆಗಳ ಗೋಡೆ ಕುಸಿತದ ಪರಿಣಾಮ ಸಾವಿನ ಸಂಖ್ಯೆ ಏರಿಕೆಯಾಗಿರುವುದಾಗಿ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶನಿವಾರ ತಿಳಿಸಿದ್ದಾರೆ.

ಮುರಾದಾಬಾದ್‌ನಲ್ಲಿ ಬಿರುಗಾಳಿಯೊಂದಿಗೆ ಆರ್ಭಟಿಸಿದ ಸಿಡಿಲಿಗೆ 7 ಮಂದಿ ಬಲಿಯಾಗಿದ್ದಾರೆ. ಸಂಭಲ್‌ನಲ್ಲಿ ಮೂರು ಮಂದಿ, ಮುಜಾಫರ್‌ನಗರ್‌ ಮತ್ತು ಮೀರತ್‌ನಲ್ಲಿ ತಲಾ ಇಬ್ಬರು ಹಾಗೂ ಅಮರೋಹಾದಲ್ಲಿ ಒಬ್ಬ ವ್ಯಕ್ತಿ ಸಾವೀಗೀಡಾಗಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಹಾನಿಗೊಳಗಾದ ಜಿಲ್ಲೆಗಳಲ್ಲಿ 24 ಗಂಟೆಯೊಳಗೆ ಪರಿಹಾರ ವಿತರಣೆಯಾಗುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ತಿಂಗಳು ಮೂರು ಬಾರಿ ಬೀಸಿದ ದೂಳು ಬಿರುಗಾಳಿ ಪರಿಣಾಮ ಒಟ್ಟು 130 ಜನ ಬಲಿಯಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.