ADVERTISEMENT

ಉತ್ತರ ಪ್ರದೇಶ: ಶೇ. 59 ಮತದಾನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಲಖನೌ/ನವದೆಹಲಿ (ಐಎಎನ್‌ಎಸ್): ಉತ್ತರಪ್ರದೇಶ ವಿಧಾನಸಭೆಯ ಐದನೇ ಹಂತದ ಚುನಾವಣೆಯಲ್ಲಿ ಗುರುವಾರ ಶೇಕಡಾ 59ರಷ್ಟು ಜನರು ಮತ ಚಲಾಯಿಸಿದ್ದಾರೆ.

49 ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಒಟ್ಟು 1.56 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.   ಕುಡಿಯುವ ನೀರಿನ ಕೊರತೆಯನ್ನು ಪ್ರತಿಭಟಿಸಿ ಏಳು ಮತಗಟ್ಟೆಗಳಲ್ಲಿ ಜನರು ಮತ ಚಲಾಯಿಸಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.