ಮುಂಬೈ: ಎದೆ ನೋವಿನಿಂದ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ಶಿವಸೇನೆಯ ಕಾರ್ಯಾಧ್ಯಕ್ಷ ಉದ್ಧವ ಠಾಕ್ರೆ ಅವರನ್ನು ಅವರ ಸಹೋದರ ಸಂಬಂಧಿ, ರಾಜಕಿಯ ವಿರೋಧಿ ರಾಜ್ ಠಾಕ್ರೆ ಸಂಜೆ ಮನೆಗೆ ವಾಪಸ್ ಕರೆತಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಇಬ್ಬರ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ರಾಜ್ ಅವರು ಉದ್ಧವ ಅವರನ್ನು ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ನಿವಾಸ `ಮಾತೋಶ್ರೀ~ಗೆ ಕರೆ ತಂದರು. ಉದ್ಧವ್ ಅವರನ್ನು ವಿವಿಧ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಿದ ನಂತರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಉದ್ಧವ್ ಜತೆಯ ಭಿನ್ನಾಭಿಪ್ರಾಯದಿಂದಾಗಿ ರಾಜ್ ಠಾಕ್ರೆ 2006ರಲ್ಲಿ ಶಿವಸೇನೆ ತೊರೆದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ರಚಿಸಿಕೊಂಡರು. ನಂತರ ಇಬ್ಬರ ಮಧ್ಯೆ ನಿರಂತರವಾಗಿ ವಾಕ್ ಸಮರ ನಡೆಯುತ್ತಿತ್ತು. ಸೋಮವಾರ ಬೆಳಿಗ್ಗೆ ಉದ್ಧವ್ ಲೀಲಾವತಿ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ಕೂಡಲೇ ಅಲ್ಲಿಗೆ ರಾಜ್ ಠಾಕ್ರೆ ಧಾವಿಸಿದ್ದರು. ಈಗಲಾದರೂ ಸಹೋದರರು ಒಂದಾಗಬಹುದು ಎಂಬ ಆಸೆ ಪಕ್ಷದ ಕಾರ್ಯಕರ್ತರಲ್ಲಿ ಚಿಗುರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.