ADVERTISEMENT

ಉ.ಪ್ರ. ಸಂಸದ ಅಖಿಲೇಶ್ ಬಂಧನ, ಉಗ್ರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 10:50 IST
Last Updated 9 ಮಾರ್ಚ್ 2011, 10:50 IST

ಲಖನೌ (ಪಿಟಿಐ/ಐಎಎನ್ಎಸ್): ಉತ್ತರಪ್ರದೇಶದಲ್ಲಿ ಮಾಯಾವತಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ಮುಂದಾದ   ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ಅವರ ಪುತ್ರ ಸಂಸದ ಅಖಿಲೇಶ್ ಯಾದವ್ ಅವರನ್ನು ಇಲ್ಲಿನ ವಿಮಾನನಿಲ್ದಾಣದಲ್ಲಿ ಬಂಧಿಸಲಾಯಿತು.

~ಬಿಎಸ್ ಪಿ ಹಠಾವೋ, ಯಪಿ ಬಚಾವೋ~ ಎಂಬ ಘೋಷ ವಾಕ್ಯದೊಂದಿಗೆ ಮೂರುದಿನಗಳ ಪ್ರತಿಭಟನೆಗೆ ಸಮಾಜವಾದಿ ಪಕ್ಷ ಕರೆಕೊಟ್ಟಿದೆ. ಇದರ ಅಂಗವಾಗಿ ಅಖಿಲೇಶ್ ಅವರು ಸಮಾಜವಾದಿ ಪಕ್ಷದ ಲಖನೌ ಮುಖ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು.

ಮಾಯಾವತಿ ಅವರ ಸರ್ಕಾರ ನಿರಂಕುಶ ಧೋರಣೆ ಹೊಂದಿದ್ದು, ತಮ್ಮ ಬಂಧನವು ಇದನ್ನು ಸಾಬೀತು ಮಾಡಿದೆ ಎಂದು ಅಖಿಲೇಶ್ ಅವರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ತಾವು ಅಖಿಲೇಶ್ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಹಲವೆಡೆ ಉದ್ರಿಕ್ತ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉಗ್ರ  ಪ್ರತಿಭಟನೆ ನಡೆಸಿದರು. ಕೆಲವೆಡೆ ಪೊಲೀಸರು ಲಾಠಿಪ್ರಹಾರ ಮಾಡಿ ಗುಂಪನ್ನು ಚದುರಿಸಿದ್ದಾರೆ. ಇದರಿಂದಾಗಿ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.