ADVERTISEMENT

ಎಂಜಿನ್‌ ವೈಫಲ್ಯ: 14 ವಿಮಾನಗಳ ಹಾರಾಟಕ್ಕೆ ಡಿಜಿಸಿಎ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:36 IST
Last Updated 12 ಮಾರ್ಚ್ 2018, 19:36 IST

ನವದೆಹಲಿ: ಕಳೆದ ಒಂದು ತಿಂಗಳಿನಲ್ಲಿ ಎಂಜಿನ್‌ ವೈಫಲ್ಯ ಉಂಟಾದ ಮೂರು ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ), ಅಮೆರಿಕದ ಪ್ರ್ಯಾಟ್‌ ಮತ್ತು ವಿಟ್ನೆ ಕಂಪನಿಯ ಎಂಜಿನ್‌ಗಳನ್ನು ಅಳವಡಿಸಿಕೊಂಡಿದ್ದ ಇಂಡಿಗೊ ಮತ್ತು ಗೋಏರ್‌ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟ ನಿರ್ಬಂಧಿಸಿದೆ.

ಸೋಮವಾರ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ‘ಇಂಡಿಗೊ’ ವಿಮಾನವೊಂದನ್ನು ಎಂಜಿನ್‌ ವೈಫಲ್ಯದಿಂದ ತುರ್ತು ಲ್ಯಾಂಡಿಂಗ್‌ ಮಾಡಲಾಯಿತು. ಈ ಹಿಂದೆ ಇಂತಹುದೇ ವೈಫಲ್ಯ ಕಂಡು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT