ADVERTISEMENT

ಎತ್ತರಿಸಿದ ರೈಲು ವ್ಯವಸ್ಥೆ ಮುಂದಿನ ವರ್ಷ ಪೂರ್ಣ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ನವದೆಹಲಿ/ಚೆನ್ನೈ (ಐಎಎಸ್‌ಎಸ್): ಚೆನ್ನೈನಲ್ಲಿ ಆರಂಭವಾಗಿರುವ ಎತ್ತರಿಸಿದ ರೈಲು ಸಂಚಾರ ವ್ಯವಸ್ಥೆಯ ವಿಸ್ತರಣಾ ಕಾಮಗಾರಿಯಾದ ಕ್ಷಿಪ್ರ ಸಮೂಹ ಸಂಚಾರ ವ್ಯವಸ್ಥೆ (ಎಂಆರ್‌ಟಿಎಸ್) 2013ಕ್ಕೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.

ವೇಲಚೇರಿ- ಸಂತ ಥಾಮಸ್ ಮೌಂಟ್ ನಡುವಿನ ಎಂಆರ್‌ಟಿಎಸ್ ಕಾಮಗಾರಿಯೂ ಮುಂದಿನ ಆರ್ಥಿಕ ವರ್ಷದಲ್ಲಿ ಮುಗಿಯಲಿದೆ. ಸದ್ಯ ಚೆನ್ನೈ ಬೀಚ್- ವೇಲಚೇರಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.

156 ವರ್ಷಗಳಷ್ಟು ಹಳೆಯದಾದ ರಾಯಪುರಂ ರೈಲು ನಿಲ್ದಾಣವನ್ನು ಬೃಹತ್ ನಿಲ್ದಾಣವನ್ನಾಗಿ (ಟರ್ಮಿನಲ್) ಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಭಾರತದ ಮೊದಲ ರೈಲು ನಿಲ್ದಾಣ ಎಂಬ ಅಭಿದಾನಕ್ಕೆ ಪಾತ್ರವಾದ ಇದು 1856ರಲ್ಲಿ ಉದ್ಘಾಟನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.