ನವದೆಹಲಿ (ಪಿಟಿಐ): ಸುಬ್ರಮಣಿಯನ್ ಸ್ವಾಮಿ ನೇತೃತ್ವದ ಜನತಾ ಪಕ್ಷವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎ ಭಾನುವಾರ ನಿರ್ಧರಿಸಿದೆ. ಇದರಿಂದ ಮೈತ್ರಿಕೂಟದ ಪಕ್ಷಗಳ ಸಂಖ್ಯೆ ಆರಕ್ಕೆ ಏರಿದಂತಾಗಿದೆ.
ಬಜೆಟ್‌ಗೆ ಪೂರ್ವಭಾವಿಯಾಗಿ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ನಿವಾಸದಲ್ಲಿ ನಡೆದ ಎನ್‌ಡಿಎ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
`ಎನ್‌ಡಿಎ ಸೇರಲು ಸ್ವಾಮಿ ಆಸಕ್ತಿ ಹೊಂದಿದ್ದರಲ್ಲದೆ, ಈ ಕುರಿತು ಮೈತ್ರಿಕೂಟದ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಲೇ ಬಂದಿದ್ದರು~ ಎಂದು ಬಿಜೆಪಿ ಮುಖಂಡ ಎಸ್.ಎಸ್.ಅಹ್ಲುವಾಲಿಯ ವರದಿಗಾರರಿಗೆ ತಿಳಿಸಿದರು.
ಮೈತ್ರಿಕೂಟದ ಇತರ ಪಕ್ಷಗಳಲ್ಲಿ ಜೆಡಿ (ಯು), ಶಿರೋಮಣಿ ಅಕಾಲಿದಳ, ಶಿವಸೇನೆ, ರಾಮದಾಸ್ ಅಥಾವಳೆ ನೇತೃತ್ವದ ಭಾರತೀಯ ರಿಪಬ್ಲಿಕನ್ ಪಕ್ಷಗಳು ಸೇರಿವೆ.
ಸಂಸತ್‌ನಲ್ಲಿನ ಎನ್‌ಡಿಎ ಪ್ರಮುಖರನ್ನು ಮಾತ್ರ ಸಭೆಗೆ ಆಹ್ವಾನಿಸಿದ್ದರಿಂದ ಅಥಾವಳೆ ಮತ್ತು ಸ್ವಾಮಿ ಪಾಲ್ಗೊಂಡಿರಲಿಲ್ಲ. ಈ ಎರಡೂ ಪಕ್ಷಗಳ ಸದಸ್ಯರು ಸಂಸತ್ತನ್ನು ಪ್ರತಿನಿಧಿಸುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.