ADVERTISEMENT

ಎರಡು ಹೊಸ ಪ್ರಭೇದದ ಮೀನು ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 18:50 IST
Last Updated 12 ಸೆಪ್ಟೆಂಬರ್ 2011, 18:50 IST

ಇಟಾನಗರ (ಪಿಟಿಐ): ಜಿ.ಬಿ. ಪಂತ್ ಹಿಮಾಲಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ರಾಜ್ಯದ ನದಿಯಲ್ಲಿ ಎರಡು ಹೊಸ ಪ್ರಭೇದದ ಮೀನುಗಳನ್ನು ಪತ್ತೆ ಹಚ್ಚಿದ್ದಾರೆ.

ಎರ್ಥಿಸ್ಟಾಯ್ಡ್ಸ ಸೆಂಕಿನ್‌ಸಿಸ್ ಮತ್ತು ಗ್ಲಿಪ್ಟೊಥೊರಾಕ್ಸ್ ಡಿಕ್ರಾನ್‌ಜಿನಿಸಿಸ್ ಕ್ಯಾಟ್‌ಫಿಶ್‌ಗಳನ್ನು ವಿಜ್ಞಾನಿಗಳಾದ ಲಕ್ಪಾ ತಮಾಂಗ್ ಮತ್ತು ಶಿವಾಜಿ ಚೌಧರಿ  ಅವರು ಪಪುಂ ಪರೇ ಜಿಲ್ಲೆಯ ದಿಕ್‌ರಾಂಗ್ ನದಿಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ಸಂಸ್ಥೆಯ ಈಶಾನ್ಯ ಘಟಕದ ಉಸ್ತುವಾರಿ ಡಾ. ಪ್ರಸನ್ನ ಕೆ. ಸಮಲ್ ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.

2006ರ ಮಾರ್ಚ್ ಮತ್ತು ಜೂನ್ ತಿಂಗಳ ಅವಧಿಯಲ್ಲಿ ದಿಕ್‌ರಾಂಗ್ ನದಿಯಲ್ಲಿ ಈ ಮೀನುಗಳನ್ನು ಹಿಡಿಯಲಾಗಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.