ನವದೆಹಲಿ (ಪಿಟಿಐ): ರಾಜೀವ್ ಸೂರಿ ನೇಮಕಕ್ಕೆ ಸಂಬಂಧಿಸಿದಂತೆ ನೋಕಿಯಾ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಇದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.
ಮೈಕ್ರೊಸಾಫ್ಟ್ ಕಂಪೆನಿ ಈಗಾಗಲೇ ನೋಕಿಯಾದ ಹ್ಯಾಂಡ್‌ಸೆಟ್ ವಿಭಾಗವನ್ನು ಸ್ವಾಧೀನಪಡಿಸಿಕೊಂಡಿದೆ. ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಈ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದರ ಬೆನ್ನಲ್ಲೇ ಸೂರಿ ಅವರ ನೇಮಕಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ. ಎಂಬಿಎ ಅಥವಾ ಇನ್ನಿತರ ಯಾವುದೇ ಸ್ನಾತಕೋತ್ತರ ಪದವಿ ಇಲ್ಲದೆಯೇ, ಕಾರ್ಪೋರೇಟ್ ವಲಯದಲ್ಲಿ ಉನ್ನತ ಹುದ್ದೆ ಅಲಂಕರಿಸುತ್ತಿರುವ ವ್ಯಕ್ತಿಗಳ ಪಟ್ಟಿಗೆ ರಾಜೀವ್ ಸೂರಿ ಕೂಡ ಸೇರ್ಪಡೆಗೊಳ್ಳುತ್ತಿರುವುದು ವಿಶೇಷ.
ಭಾರತದಲ್ಲಿ ಹುಟ್ಟಿದರೂ, ಜೀವನದ ಬಹುಪಾಲು ಸಮಯವನ್ನು ಸೂರಿ ಕುವೈತ್‌ನಲ್ಲಿ ಕಳೆದಿದ್ದಾರೆ. ಸದ್ಯ ಅವರು ಫಿನ್ಲೆಂಡ್‌ನಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.