
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಏಸ್ ಫೈಟರ್ ಪೈಲಟ್ ಏರ್ ಮಾರ್ಷಲ್ ಅರುಪ್ ರಹಾ ಅವರು ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಡಿಸೆಂಬರ್ 31ರಂದು ನಿವೃತ್ತರಾಗುತ್ತಿರುವ ಹಾಲಿ ವಾಯುಪಡೆ ಮುಖ್ಯಸ್ಥ ನಾಕ್ ಬ್ರೌನೆ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
1954ರ ಡಿಸೆಂಬರ್ 26ರಂದು ಜನಿಸಿದ 59ರ ಹರೆಯದ ರಹಾ ಅವರು ವಾಯುಪಡೆ ಮುಖ್ಯಸ್ಥರಾಗಿ ಮೂರು ವರ್ಷಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ.
'ಸರ್ಕಾರವು ಪ್ರಸ್ತುತ ವಾಯಪಡೆ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ರಹಾ ಅವರನ್ನು ವಾಯಪಡೆ ಮುಖ್ಯಸ್ಥರಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ನಿವೃತ್ತರಾಗುತ್ತಿರುವ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ನಾಕ್ ಬ್ರೌನೆ ಸ್ಥಾನದಲ್ಲಿ ಅವರು ನಿಯುಕ್ತಿಯಾಗುವರು' ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆಯೊಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.