ADVERTISEMENT

ಐಆರ್‌ಸಿಟಿಸಿ: ತಿಂಗಳಿಗೆ 6 ಟಿಕೆಟ್‌ ಬುಕಿಂಗ್‌ಗೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 9:27 IST
Last Updated 29 ಜನವರಿ 2016, 9:27 IST
ಐಆರ್‌ಸಿಟಿಸಿ: ತಿಂಗಳಿಗೆ  6 ಟಿಕೆಟ್‌ ಬುಕಿಂಗ್‌ಗೆ ಮಾತ್ರ ಅವಕಾಶ
ಐಆರ್‌ಸಿಟಿಸಿ: ತಿಂಗಳಿಗೆ 6 ಟಿಕೆಟ್‌ ಬುಕಿಂಗ್‌ಗೆ ಮಾತ್ರ ಅವಕಾಶ   

ನವದೆಹಲಿ (ಐಎಎನ್‌ಎಸ್‌): ಇನ್ನು ಮುಂದೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಒಂದು ಯೂಸರ್‌ ಐಡಿ ಮೂಲಕ ಒಂದು ತಿಂಗಳಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಮಾತ್ರ ಕಾಯ್ದಿರಿಸಬಹುದು. ಫೆಬ್ರುವರಿ 15ರಿಂದಲೇ  ಹೊಸ ನಿಯಮ ಜಾರಿಗೆ ಬರಲಿದೆ.

ಆನ್‌ಲೈನ್‌ ಮೂಲಕ ಹೆಚ್ಚುವರಿ ಟಿಕೆಟ್‌ ಕಾಯ್ದಿರಿಸಿಕೊಂಡು ಅದನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದನ್ನು ತಡೆಯಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ. 

‌‌ಇಲ್ಲಿಯವರೆಗೆ 1 ಯೂಸರ್‌ ಐಡಿ ಮೂಲಕ 1 ತಿಂಗಳಲ್ಲಿ ಗರಿಷ್ಠ 10 ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಲು ಅವಕಾಶ ಇತ್ತು. ಆದರೆ, ಒಟ್ಟು ಬಳಕೆದಾರರಲ್ಲಿ ಶೇ 10ರಷ್ಟು ಮಂದಿ ಮಾತ್ರ 6 ಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು. ಇನ್ನುಳಿದ 90ರಷ್ಟು ಮಂದಿ ತಿಂಗಳಿಗೆ 6ಕ್ಕಿಂತ ಕಡಿಮೆ  ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು. ಈ ಅಂಶ ಗಮನಿಸಿ ಬುಕಿಂಗ್‌ಗೆ ಮಿತಿ ಹೇರಲಾಗಿದೆ ಎಂದು ರೈಲ್ವೆ  ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT