ಗ್ವಾಲಿಯರ್ (ಪಿಟಿಐ): ಕಲ್ಲು ಗಣಿ ಮಾಫಿಯಾಕ್ಕೆ ಐಪಿಎಸ್ ಅಧಿಕಾರಿಯೊಬ್ಬರು ಬಲಿಯಾದ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲಿ ಶುಕ್ರವಾರ ಮತ್ತೊಬ್ಬ ಯುವ ಐಪಿಎಸ್ ಅಧಿಕಾರಿ ಮೇಲೆ ಮದ್ಯ ಮಾಫಿಯಾದಿಂದ ಹಲ್ಲೆ ನಡೆದಿದೆ.
ಹೋಳಿ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದ್ದರೂ ಎಟಾವ ಮತ್ತು ಲಹರ್ ರಸ್ತೆಯಲ್ಲಿರುವ ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿತ್ತು. ಇದರ ಸುಳಿವು ಅರಿತು ಭಿಂಡ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯದೇವನ್ ಅವರು ಸಿಬ್ಬಂದಿಯೊಂದಿಗೆ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ಸ್ಥಳಕ್ಕೆ ಬಂದು ಪ್ರಶ್ನಿಸುತ್ತಿದ್ದಂತೆಯೇ ಬಿಜೆಪಿ ಮಾಜಿ ಶಾಸಕ ನರೇಂದ್ರ ಸಿಂಗ್ ಬೆಂಬಲಿಗರು ಎನ್ನಲಾದ ಗುಂಪು ಅವರತ್ತ ದೊಣ್ಣೆ ಬೀಸಿತಲ್ಲದೆ, ಮನಬಂದಂತೆ ಕಲ್ಲುಗಳನ್ನು ತೂರಾಡಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನರೇಂದ್ರ ಸಿಂಗ್, ಅವರ ಏಳು ಬೆಂಬಲಿಗರು ಮತ್ತು 18 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.