ADVERTISEMENT

ಕಟ್ಟಡದಿಂದ ಹಾರಿ ಹುಬ್ಬಳ್ಳಿ ಮೂಲದ ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಹೈದರಾಬಾದ್‌ (ಪಿಟಿಐ):  ಕರ್ನಾಟಕ ಮೂಲದ ಸಾಫ್ಟ್‌ವೇರ್‌ ನೌಕರನೊಬ್ಬ ಇಲ್ಲಿನ ಸಿಂಗಪುರ ಟೌನ್‌ಶಿಪ್‌ನಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಹುಬ್ಬಳ್ಳಿಯ ದೀಪಕ್‌ ಎಂದು ಗುರುತಿಸಲಾಗಿದೆ. 33 ವರ್ಷದ ದೀಪಕ್‌ ಮೊದಲಿಗೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು  ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ನಂತರ ಮೂರನೇ ಮಹಡಿಗೆ ಹೋಗಿ ಅಲ್ಲಿಂದ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಿಂದ ವರ್ಗಾವಣೆ­ಗೊಂಡು­ ನವೆಂಬರ್‌ 18ರಂದು ಇಲ್ಲಿನ ಸಾಫ್ಟ್‌ವೇರ್‌ ಸಂಸ್ಥೆಯೊಂದ ರಲ್ಲಿ ಸೇರಿಕೊಂಡಿದ್ದ ದೀಪಕ್‌, ನವೆಂಬರ್‌ 24ರಂದು ಅಣ್ಣೋಜಿ ಗುಡದ ಸಿಂಗಪುರ ಟೌನ್‌ಶಿಪ್‌ನಲ್ಲಿ ಮನೆ­ಯನ್ನು ಬಾಡಿಗೆ ಪಡೆದಿದ್ದರು. ಅಲ್ಲಿ ಇವರು ಒಬ್ಬರೇ ವಾಸ
ವಾಗಿದ್ದರು. ಎಂದು ಪೊಲೀಸ್‌ ಇನ್‌­ಸ್ಪೆಕ್ಟರ್‌ ವಿವಿ ಚಲಪತಿ ತಿಳಿಸಿದ್ದಾರೆ.

ಘಟನೆ ಸ್ಥಳದಲ್ಲಿ ಯಾವುದೇ ­ಪತ್ರ ಪತ್ತೆಯಾಗಿಲ್ಲ. ದೀಪಕ್‌ ಅವರ ಕುಟುಂಬಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಅವರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಅವರ ಆತ್ಮಹತ್ಯೆಗೆ ಕಾರಣವನ್ನು ಪತ್ತೆ­ಹಚ್ಚ­ಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.