ADVERTISEMENT

ಕಠಿಣ ಕ್ರಮ: ಬ್ರಿಟನ್‌

ಪಿಟಿಐ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST

ಲಂಡನ್‌: ಮುಂದಿನ ಎರಡು ವರ್ಷಗಳ ಕಾಲ ಬ್ರಿಟನ್‌ಗೆ ಭಯೋತ್ಪಾದಕರ ದಾಳಿಯ ಬೆದರಿಕೆ ಇದ್ದು, ಅದನ್ನು ಎದುರಿಸಲು ಕಠಿಣ ಕ್ರಮಗಳನ್ನು ಅಳವಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಉಗ್ರರ ಸಂಭಾವ್ಯ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಭದ್ರತಾ ಸಂಸ್ಥೆಗಳ ಬಲವರ್ಧನೆಗೆ ಮುಂದಾಗಿರುವುದಾಗಿ ಬ್ರಿಟನ್‌ನ ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಹೇಳಿದ್ದಾರೆ.

‘ಮುಂದಿನ ಎರಡು ವರ್ಷಗಳ ಕಾಲ ಉಗ್ರರಿಂದ ಹೆಚ್ಚು ದಾಳಿಗಳು ನಡೆಯುವ ಸಾಧ್ಯತೆ ಇದೆ. ಮುಂದೆಯೂ ಅದು ಹೆಚ್ಚಳವಾಗಬಹುದು’ ಎಂದೂ ಹೇಳಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯದ ಅಂಗವಾಗಿ ಶಂಕಿತ ಉಗ್ರರ ಮೇಲೆ ನಿಗಾ ವಹಿಸುವುದು ಮತ್ತು ಉಗ್ರರೆಂದು ದೃಢಪಟ್ಟರೆ ಅಂಥವರಿಗೆ ದೀರ್ಘ ಕಾಲ ಜೈಲು ಶಿಕ್ಷೆ ನೀಡುವುದು ಹೊಸ ಯೋಜನೆಯಲ್ಲಿ ಒಳಪಟ್ಟಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.