ADVERTISEMENT

ಕನ್ನಡಿಗರಿಗೆ ಕಾಡಿದ ಭಾಷಾ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST

ಪೆನುಕೊಂಡ (ಆಂಧ್ರಪ್ರದೇಶ): ರೈಲು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕನ್ನಡಿಗರು ಭಾಷಾ ಸಮಸ್ಯೆಯನ್ನು ಎದುರಿಸಬೇಕಾಯಿತು.

ಬಹುತೇಕ ಮಂದಿ ಕನ್ನಡಿಗರಾಗಿದ್ದು, ಅವರಿಗೆ ತೆಲುಗು ಬರುತ್ತಿರಲಿಲ್ಲ. ಅಲ್ಲಿನ ಆಂಧ್ರಪ್ರದೇಶ ಪೊಲೀಸರಿಗೆ ಕನ್ನಡ ಬರುವುದಿಲ್ಲ. ಹೀಗಾಗಿ ಘಟನೆಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬ ಸದಸ್ಯರಿಗೆ ಅಲ್ಲಿನ ಪೊಲೀಸರೊಂದಿಗೆ ಸುಗಮ ಸಂವಹನ ನಡೆಸಲು ಕಷ್ಟವಾಯಿತು. ಕೇಂದ್ರ ಸಚಿವರು, ಆಂಧ್ರ ಸಿಎಂ. ಸೇರಿದಂತೆ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿದಾಗ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.