ಕೋಲ್ಕತ್ತ (ಪಿಟಿಐ): ಇಂಗ್ಲಿಷ್ ಶಬ್ದಕೋಶಗಳ ಪ್ರಕಾಶನದಲ್ಲಿ ತೊಡಗಿರುವ ಅತ್ಯಂತ ಹಳೆಯ ಕಂಪೆನಿಗಳಲ್ಲಿ ಒಂದಾದ ಕಾಲಿನ್ಸ್ ಸಂಸ್ಥೆ ಕನ್ನಡ ಸೇರಿದಂತೆ ಭಾರತದ 10 ಪ್ರಾದೇಶಿಕ ಭಾಷೆಗಳ ದ್ವಿಭಾಷಾ ಶಬ್ದಕೋಶಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.
ಬಂಗಾಳಿ, ತಮಿಳು, ತೆಲುಗು, ಗುಜರಾತಿ, ಹಿಂದಿ, ಒಡಿಯಾ, ಮಲಯಾಳಂ, ಮರಾಠಿ ಮತ್ತು ಉರ್ದು ಶಬ್ದಕೋಶಗಳು ಬಿಡುಗಡೆಯಾಗಲಿರುವ ಇತರ ಭಾಷೆಗಳು ಎಂದು ಪ್ರಕಾಶನ ನಿರ್ದೇಶಕಿ ಡಾ.ಇಲೈನ್ ಹಿಗ್ಲ್‌ಟನ್ ತಿಳಿಸಿದ್ದಾರೆ.
ಯೂರೋಪ್, ಸಂಯುಕ್ತ ಸಂಸ್ಥಾನ (ಯುಕೆ), ಚೀನಾ, ಜಪಾನ್, ಕೊರಿಯಾ ಮತ್ತಿತರ ರಾಷ್ಟ್ರಗಳಲ್ಲಿ ಶಬ್ದಕೋಶಗಳಿಗೆ ಬೇಡಿಕೆ ಕುಸಿದಿದೆ. ಆದರೆ ಭಾರತದಲ್ಲಿ ಶಬ್ದಕೋಶಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಶಬ್ದಕೋಶಗಳ ಮಾರಾಟ ಶೇ 75ರಷ್ಟು ಹೆಚ್ಚಾಗಿದೆ ಎಂದೂ ಹೇಳಿದರು.
ಶಬ್ದಕೋಶಗಳ ಡಿಜಿಟಲ್ ಆವೃತ್ತಿಯನ್ನು ಅಳವಡಿಸುವ ಬಗ್ಗೆ ಮೊಬೈಲ್ ಕಂಪೆನಿಗಳು ಮತ್ತು ಅಂತರ್ಜಾಲ ಸೇವಾ ಪೂರೈಕೆ ಕಂಪೆನಿಗಳ ಜತೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ದ್ವಿಭಾಷಾ ಶಬ್ದಕೋಶಗಳು ಮೊಬೈಲ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.