ADVERTISEMENT

ಕರ್ನಾಟಕ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿರಿಯ ವಕೀಲ ರಾಂ ಜೇಠ್ಮಲಾನಿ

ಏಜೆನ್ಸೀಸ್
Published 17 ಮೇ 2018, 9:16 IST
Last Updated 17 ಮೇ 2018, 9:16 IST
ರಾಂ ಜೇಠ್ಮಲಾನಿ (ಸಂಗ್ರಹ ಚಿತ್ರ)
ರಾಂ ಜೇಠ್ಮಲಾನಿ (ಸಂಗ್ರಹ ಚಿತ್ರ)   

ನವದೆಹಲಿ: ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ ಅವರ ಕ್ರಮ ಪ್ರಶ್ನಿಸಿ ಹಿರಿಯ ವಕೀಲ ರಾಂ ಜೇಠ್ಮಲಾನಿ ಸುಪ್ರೀಂ ಕೋರ್ಟ್‌ ಮಟ್ಟಿಲೇರಿದ್ದಾರೆ.

ವೈಯಕ್ತಿಕ ನೆಲೆಗಟ್ಟಿನಲ್ಲಿ ಅವರು ವಜುಭಾಯಿ ವಾಲ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಜೇಠ್ಮಲಾನಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಿದ್ದಾರೆ. ಜತೆಗೆ, ವಿಚಾರಣೆಗೆ ಹಾಜರಾಗುವಂತೆ ಜೇಠ್ಮಲಾನಿಗೆ ಸೂಚಿಸಿದ್ದಾರೆ.

‘ರಾಜ್ಯಪಾಲರ ನಿರ್ಧಾರ ಸಾಂವಿಧಾನಿಕ ಅಧಿಕಾರದ ದುರುಪಯೋಗವಾಗಿದ್ದು, ರಾಜ್ಯಪಾಲರ ಹುದ್ದೆಯ ಘನತೆಗೆ ಅಪಖ್ಯಾತಿ ತಂದಿದೆ’ ಎಂದು ಅರ್ಜಿಯಲ್ಲಿ ಜೇಠ್ಮಲಾನಿ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.