ADVERTISEMENT

ಕಲ್ಲಿದ್ದಲು ಹಗರಣ: ಇಂದು ವಸ್ತುಸ್ಥಿತಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 20:00 IST
Last Updated 9 ಮಾರ್ಚ್ 2014, 20:00 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣದ ತನಿ­ಖೆಯ ವಸ್ತುಸ್ಥಿತಿ ವರದಿಯನ್ನು ಸಿಬಿಐ  ಸುಪ್ರೀಂ­ಕೋರ್ಟ್‌ಗೆ ಸೋಮವಾರ ಸಲ್ಲಿಸಲಿದೆ. 

2012ರಲ್ಲಿ ಸಿಬಿಐ ದಾಖಲಿಸಿದ್ದ ಪ್ರಕರಣವೊಂದರ ಆರೋಪ­ಪಟ್ಟಿ­ಯನ್ನೂ ಇದೇ ವೇಳೆ ಸಲ್ಲಿಸಲಿದೆ. 

ಫೆ.11 ರಂದು ನಡೆದಿದ್ದ ವಿಚಾರಣೆಯಲ್ಲಿ ಕಲ್ಲಿದ್ದಲು ಹಗರಣದ ತನಿಖೆಯಲ್ಲಾದ ಪ್ರಗತಿಯ ಕುರಿತು ವಸ್ತುಸ್ಥಿತಿ ವರದಿ ಹಾಗೂ  ಆರು ಪ್ರಕರಣಗಳ ಆರೋಪ ಪಟ್ಟಿಯನ್ನೂ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಜಿಂದಾಲ್‌ ಸ್ಟೀಲ್‌ ಮತ್ತು ಪವರ್, ಹಿಂಡಾಲ್ಕೊ, ಯಾವತ್ಮಲ್‌ ಎನರ್ಜಿ ಸೇರಿದಂತೆ 16 ಕಂಪೆನಿಗಳ ವಿರುದ್ಧ ಸಿಬಿಐ, ಎಫ್‌ಐಆರ್‌ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.