ADVERTISEMENT

ಕಲ್ಲು ತೂರಾಟ: ಚಿರತೆ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಕೃಷ್ಣಗಿರಿ (ತಮಿಳುನಾಡು), (ಪಿಟಿಐ):  ಜಿಲ್ಲೆಯ ಮಥುರಾ ಪ್ರದೇಶದಲ್ಲಿ ಸಾರ್ವಜನಿಕರ ದಾಳಿಯಿಂದ ಗಾಯಗೊಂಡು ಆರು ತಿಂಗಳ ಗಂಡು ಚಿರತೆ ಮರಿಯೊಂದು ಬುಧವಾರ ಮೃತಪಟ್ಟಿದೆ. ಹತ್ತಿರದ ತಿರುಪತ್ತೂರು ಅರಣ್ಯದಿಂದ ಬಂದಿದ್ದ ಈ ಮರಿ ಸಾರ್ವಜನಿಕರ ಮೇಲೆ ದಾಳಿ ಮಾಡಿ, 30 ವರ್ಷದ ವ್ಯಕ್ತಿಯೊಬ್ಬನನ್ನು ಗಾಯಗೊಳಿಸಿತ್ತು.

ಇದರಿಂದ ಕ್ರೋಧಗೊಂಡ ಜನ ಅದರ ಮೇಲೆ ಕಲ್ಲುಗಳನ್ನು ತೂರಿದ್ದರು. ಆಗ ಹೊಲಗಳ ಕಡೆ ಓಡಿ ಹೋದ ಅದು ನೀರಿಲ್ಲದ 50 ಅಡಿ ಆಳದ ಬಾವಿಯಲ್ಲಿ ಬಿದ್ದಿತ್ತು. ಆಗ ಮರಿಯ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.