ADVERTISEMENT

ಕಳೆದ ಬಾರಿಗಿಂತ ಕಡಿಮೆ ಬಿಸಿಲು!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:31 IST
Last Updated 1 ಏಪ್ರಿಲ್ 2018, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರ್ಚ್‌–ಏಪ್ರಿಲ್‌ ಬಂತೆಂದರೆ ರಣ ಬಿಸಿಲಿಗೆ ಹೆದರಿ ಬೆವರುತ್ತಿದ್ದ ಜನರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಬೇಸಿಗೆಯ ಬಿಸಿಲು ಅಷ್ಟು ತೀವ್ರವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಂತ, ಈ ಬಾರಿ ಬಿಸಿಲು ಧಗೆ ಏನೂ ಕಡಿಮೆ ಇರುವುದಿಲ್ಲ. ಆದರೆ, ಕಳೆದ ಬೇಸಿಗೆಗೆ ಹೋಲಿಕೆ ಮಾಡಿದರೆ ಮಾತ್ರ ತುಸು ಕಡಿಮೆ ಎಂದು ಸ್ಪಷ್ಟಪಡಿಸಿದೆ. 

ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳ ಸರಾಸರಿ ತಾಪಮಾನ ಕಳೆದ ವರ್ಷಕ್ಕಿಂತ ಕಡಿಮೆಯಾಗಿರುತ್ತದೆ ಎಂದು ಮೂರು ತಿಂಗಳ ಹವಾಮಾನದ ಮುನ್ನೋಟದಲ್ಲಿ ಹೇಳಿದೆ.

ADVERTISEMENT

ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಕಂಡುಬರುತ್ತದೆ. ಉಳಿದ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಲಿದೆ.

**

* ಗಿರಿಧಾಮಗಳನ್ನೂ ಕಾಡಲಿದೆ ತಾಪಮಾನ

* 2010ರಿಂದ ಬಿಸಿಗಾಳಿ ತೀವ್ರತೆ ಏರಿಕೆ

* 15 ವರ್ಷಗಳಿಂದ ಬಿಸಿಗಾಳಿ ದಿನಗಳ ಪ್ರಮಾಣದಲ್ಲಿ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.