ADVERTISEMENT

ಕಾರವಾರದಲ್ಲಿ ನೌಕಾಪಡೆಯ ವಾಯು ನೆಲೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಭಾರತೀಯ ನೌಕಾಪಡೆಯು ದೇಶದ ಪಶ್ಚಿಮ ಕರಾವಳಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಮರ ಮತ್ತು ಕಣ್ಗಾವಲು ವಿಮಾನಗಳ ಕಾರ್ಯನಿರ್ವಹಣೆಗಾಗಿ ಕಾರವಾರದಲ್ಲಿ ಹೊಸ ನೌಕಾ ವಾಯು ನೆಲೆಯನ್ನು ಸ್ಥಾಪಿಸಲು ಯೋಜಿಸಿದೆ.

ಸೇನಾ ವಿಮಾನಗಳ ಕಾರ್ಯನಿರ್ವಹಣೆ ಮತ್ತು ನೆಲೆಗಾಗಿ ಕಾರವಾರದಲ್ಲಿ ನೌಕಾ ವಾಯುನೆಲೆಯನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದರು.

ಸೀಬರ್ಡ್ ಯೋಜನೆಯ ಹಂತ 2ರ ಅಡಿ ನೌಕಾಪಡೆಯ ರೂ 10 ಸಾವಿರ ಕೋಟಿಗಳ ಯೋಜನೆಯ ಭಾಗವಾಗಿ ಈ ನೌಕಾ ವಾಯು ನೆಲೆಯನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.