ADVERTISEMENT

ಕಾಶ್ಮೀರ ಪಂಡಿತರಿಗೆ ಪ್ಯಾಕೇಜ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಶ್ರೀನಗರ (ಪಿಟಿಐ): ವಲಸೆ ಹೋದ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ರೂ 1,600 ಕೋಟಿ ಮೊತ್ತದ ಹಣಕಾಸು ಪ್ಯಾಕೇಜ್‌ನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಘೋಷಿಸಿದೆ.

`ಕಾಶ್ಮೀರದಿಂದ ವಲಸೆ ಹೋದ ಪಂಡಿತರು ಹಿಂತಿರುಗಿ ಬರುವಂತೆ ಪ್ರೋತ್ಸಾಹಿಸಲು ಹಾಗೂ ಅವರ ಪುನರ್ವಸತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂ 1,618 ಕೋಟಿ ಪ್ಯಾಕೇಜ್ ಘೋಷಿಸಿದೆ~ ಎಂದು ಕಂದಾಯ ಖಾತೆ ರಾಜ್ಯ ಸಚಿವ ನಾಸಿರ್ ಅಸ್ಲಾಂ ವಾನಿ ತಿಳಿಸಿದರು.ವಲಸೆ ಹೋದ ಪಂಡಿತರಿಗೆಂದೇ 3000ದಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆಯಲ್ಲದೆ, ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಇದೇ ವೇಳೆ 2,148 ಜನರಿಗೆ ನೇಮಕಾತಿ ಆದೇಶಗಳನ್ನು ಕಳುಹಿಸಲಾಗಿದ್ದು ಇವರಲ್ಲಿ 1,441 ಮಂದಿ ಈಗಾಗಲೇ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.