ADVERTISEMENT

ಕುಡುಕ ವರನನ್ನು ನಿರಾಕರಿಸಿದ ವಧು

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಕೇಂದ್ರಪಾರ (ಒಡಿಶಾ) (ಪಿಟಿಐ): ವಿವಾಹ ದಿನವೇ ಮದ್ಯ ಸೇವಿಸಿ ಬಂದಿದ್ದ  ವರನನ್ನು, ವಧು ದಿಟ್ಟತನದಿಂದ ನಿರಾಕರಿಸಿದ ಘಟನೆ ಇಲ್ಲಿನ ಚಪ್ಪಲಿ ಗ್ರಾಮದಲ್ಲಿ ನಡೆದಿದೆ. ಅತಿ ಹೆಚ್ಚು ಮದ್ಯಪಾನಿಗಳು ಇರುವ ಜಿಲ್ಲೆ ಕೇಂದ್ರಪಾರ. ಇಲ್ಲಿಯ  ಚಪ್ಪಲಿ ಗ್ರಾಮದಲ್ಲಿ 22 ವರ್ಷದ ವಧುವಿನೊಂದಿಗೆ 26 ವರ್ಷದ ಮಲ್ಲಿಕ್ ಜೊತೆ ವಿವಾಹ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ವರನ ಮದ್ಯಪಾನದ ಗುಟ್ಟು ಬಹಿರಂಗಗೊಂಡಾಗ ಆ ಕ್ಷಣದಲ್ಲೇ ವಧು ಮದುವೆಯನ್ನು ನಿರಾಕರಿಸಿ ದಿಟ್ಟೆ ಎನಿಸಿಕೊಂಡಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.