ADVERTISEMENT

`ಕೂಡುಂಕುಳಂ ವಿದ್ಯುತ್‌ನಲ್ಲಿ ಕರ್ನಾಟಕಕ್ಕೂ ಪಾಲು'

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ತಿರುನಲ್ವೇಲಿ (ಪಿಟಿಐ):ಕೂಡುಂಕುಳಂ ಪರಮಾಣು ಸ್ಥಾವರದಲ್ಲಿ ಉತ್ಪಾದನೆಯಾಗಲಿರುವ 1000 ಮೆ.ವಾ. ವಿದ್ಯುತ್‌ನಲ್ಲಿ 465 ಮೆ.ವಾ. ವಿದ್ಯುತ್ತನ್ನು ತಮಿಳುನಾಡಿಗೆ ನೀಡಿ, ಉಳಿದದ್ದನ್ನು  ಕರ್ನಾಟಕ, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಹಂಚಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸ್ಥಾವರದಲ್ಲಿ ಉತ್ಪಾದನೆ ಆಗಲಿರುವ ವಿದ್ಯುತ್ತನ್ನು ತನಗೇ ನೀಡುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಆದರೆ, ಪೂರ್ವನಿಗದಿ ಮಾಡಿರುವ ಪ್ರಕಾರ ತಮಿಳುನಾಡು, ಕರ್ನಾಟಕ, ಪುದುಚೇರಿ ಮತ್ತು ಕೇರಳ ರಾಜ್ಯಗಳ ನಡುವೆ ಇದು ಹಂಚಿಕೆ ಆಗಬೇಕಿದೆ ಎಂದು ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ ಅವರುತಿಳಿಸಿದರು.

ಕೂಡುಂಕುಳಂ ಪರಮಾಣು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸುವ ಕುರಿತು ತಿಂಗಳಾಂತ್ಯಕ್ಕೆ ಮುನ್ನ ಆದೇಶ ಹೊರಡಿಸಲಾಗುವುದು.  ಪರಮಾಣು ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಾವರದ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಡಿ.3ರಂದು ಅವರು ಸಭೆಯನ್ನೂ ನಡೆಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.