ನವದೆಹಲಿ (ಪಿಟಿಐ): ಉದಾರೀಕರಣದಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ, ರಕ್ಷಣಾ ಕ್ಷೇತ್ರದ ನೂರಾರು ಉತ್ಪನ್ನಗಳನ್ನು
ಪರವಾನಗಿ ಇಲ್ಲದೆ ತಯಾರಿಸಲು ಗುರುವಾರ ಅನುಮತಿ ನೀಡಿದೆ.
ರಕ್ಷಣಾ ಉತ್ಪನ್ನಗಳ ಉಪ ಜೋಡಣೆ, ಬಿಡಿ ಭಾಗಗಳು, ಎರಕ ಹೊಯ್ಯುವಿಕೆ, ಇರುಳು ಗೋಚರ ಸಲಕರಣೆಗಳು, ವಿಚಕ್ಷಣಾ ಸಾಧನಗಳನ್ನು ಇನ್ನು ಮುಂದೆ ಕೈಗಾರಿಕಾ ಪರವಾನಗಿ ಪಡೆಯದೆ ತಯಾರಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.