ADVERTISEMENT

ಕೇಜ್ರಿವಾಲ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 14:06 IST
Last Updated 16 ಮಾರ್ಚ್ 2014, 14:06 IST

ನಾಗಪುರ್ (ಪಿಟಿಐ): ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಒಡೆತನದ ಪೂರ್ತಿ ಕಂಪೆನಿಯು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆರು ಜನರ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ   ಸ್ಥಳೀಯ ನ್ಯಾಯಾಲಯವು ಆರೋಪಿಗಳಿಗೆ ನೋಟಿಸ್ ಜಾರಿಮಾಡಿದೆ.

ಗಡ್ಕರಿ ಅವರು ನಿದೇರ್ಶಕರಾಗಿರುವ ಪೂರ್ತಿ ಪವರ್ ಮತ್ತು ಶುಗರ್ ಲಿಮಿಟೆಡ್ ಕಂಪೆನಿಯು ಕೇಜ್ರಿವಾಲ್ ಮತ್ತು ನಾಗಪುರದಲ್ಲಿ  ಎಎಪಿ ಲೋಕಸಭಾ ಚುನಾವಣೆಯ ಸ್ಪರ್ಧಾಳು ಆಗಿರುವ ಅಂಜಲಿ ದಮಾನಿಯಾ ಹಾಗೂ ಇತರ ಐವರ ವಿರುದ್ಧ `ಆಧಾರ ರಹಿತ ಮತ್ತು ಮಾನನಷ್ಟ'ಕರವಾದಂತಹ ಆರೋಪಗಳನ್ನು ಮಾಡಿದ್ದಾರೆ ಎಂದು ಆಪಾದಿಸಿ ಮಾನನಷ್ಟ ಮೊಕದ್ದಮೆ ಹೂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೊಕದ್ದಮೆ ದಾಖಲಿಸಿಕೊಂಡ ಸಿವಿಲ್ ನ್ಯಾಯಾಲಯವು ಕೇಜ್ರಿವಾಲ್, ದಮಾನಿಯಾ, ಎಎಪಿ ವಕ್ತಾರ ಗಿರೀಶ್ ನಂದಗಾಂವ್ಕರ್, ಮತ್ತು ಪಕ್ಷದ ಕಾರ್ಯಕರ್ತರಾದ ರಾಹುಲ್ ಪುಗಲಿಯಾ, ದೇವೇಂದ್ರ ವಾಂಖೇಡೆ, ಪ್ರಜಕ್ತ್ ಅತುಲ್ ಉಪಾಧ್ಯಾಯ್ ಹಾಗೂ ಪ್ರಧ್ಯುಮ್ನ ಸಹಸ್ರಭೂಜನೇ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ದ್ವೀತಿಯ ಸಿವಿಲ್ ನ್ಯಾಯಾಧೀಶ ಎಸ್. ವೈ.ಅಬಜ್ಜಿ ಅವರು ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT