ADVERTISEMENT

ಕೇಬಲ್ ಏಕಸ್ವಾಮ್ಯ ಟ್ರಾಯ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ನವದೆಹಲಿ: ದೇಶದಾದ್ಯಂತ ಕೇಬಲ್ ವಲಯದಲ್ಲಿರುವ ಏಕಸ್ವಾಮ್ಯವನ್ನು ತೊಡೆದುಹಾಕಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ವಾರ್ತಾ ಮತ್ತು ಪ್ರಸಾರ ಖಾತೆ  ಸಚಿವಾಲಯವು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಸೂಚಿಸಿದೆ.

`ಕೇಬಲ್ ವಲಯದಲ್ಲಿರುವ ಏಕ ಸ್ವಾಮ್ಯವನ್ನು ಹೇಗೆ ತೆಗೆದುಹಾಕಬಹುದು ಎಂಬ ಬಗ್ಗೆ ಸಲಹೆ ನೀಡುವಂತೆ ನಾನು ಟ್ರಾಯ್‌ಗೆ ಮನವಿ ಮಾಡಿದ್ದೇನೆ~ ಎಂದು  ವಾರ್ತೆ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಹೇಳಿದ್ದಾರೆ.

ಮಹತ್ವಾಕಾಂಕ್ಷೆಯ ಡಿಜಿಟಲೀಕರಣ ಯೋಜನೆ 2ನೇ ಹಂತವನ್ನು ಪ್ರವೇಶಿಸುತ್ತಿರುವಂತೆಯೇ ಕೇಂದ್ರ ಸರ್ಕಾರವು ಕೇಬಲ್ ವಲಯದಲ್ಲಿ ಸ್ಥಳೀಯ, ರಾಜ್ಯ ಅಥವಾ ಪ್ರಾದೇಶಿಕ ಮಟ್ಟದಲ್ಲಿರುವ ಏಕಸ್ವಾಮ್ಯವನ್ನು ಹತ್ತಿಕ್ಕಲು ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡುವಂತೆ ಟ್ರಾಯ್‌ಗೆ ಸೂಚಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.