ADVERTISEMENT

ಕೇರಳದಾದ್ಯಂತ ಮುಂಗಾರು ಚುರುಕು; ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ

ಪಿಟಿಐ
Published 2 ಜೂನ್ 2017, 14:31 IST
Last Updated 2 ಜೂನ್ 2017, 14:31 IST
ಕೇರಳದ ಕೊಚ್ಚಿಯಲ್ಲಿ ಶುಕ್ರವಾರ ಮಳೆ ಬೀಳುತ್ತಿದ್ದ ವೇಳೆ ಯುವತಿಯರು ಕೊಡೆ ಹಿಡಿದು ಸಾಗಿದರು.
ಕೇರಳದ ಕೊಚ್ಚಿಯಲ್ಲಿ ಶುಕ್ರವಾರ ಮಳೆ ಬೀಳುತ್ತಿದ್ದ ವೇಳೆ ಯುವತಿಯರು ಕೊಡೆ ಹಿಡಿದು ಸಾಗಿದರು.   

ತಿರುವನಂತಪುರ: ನೈರುತ್ಯ ಮುಂಗಾರು ಚುರುಕಾಗಿದ್ದು, ಶುಕ್ರವಾರ ಕೇರಳ ರಾಜ್ಯದಾದ್ಯಂತ ಹಾಗೂ ಲಕ್ಷದ್ವೀಪದಲ್ಲಿ ಧಾರಾಕಾರ ಮಳೆ ಬಿದ್ದಿದೆ.

ಕೊಯಿಕೋಡ್‌ನ ವಡಗರದಲ್ಲಿ ಅತಿ ಹೆಚ್ಚು 8 ಸೆಂ.ಮೀ., ಅಲಪುಳದ ಮಾವೆಲಿಕರ ಮತ್ತು  ಲಕ್ಷದ್ವೀಪದ ಮಿನಿಕೊಯ್‌ನಲ್ಲಿ 7 ಸೆಂ.ಮೀ. ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂನ್‌ 4ರ ವರೆಗೆ ಕೇರಳ ಮತ್ತು ಲಕ್ಷದ್ವೀಪದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

ADVERTISEMENT

ಮೀನುಗಾರರಿಗೆ ಎಚ್ಚರಿಕೆ
ಶುಕ್ರವಾರ ಮಧ್ಯಾಹ್ನ 2ರಿಂದ ಮುಂದಿನ 24 ಗಂಟೆಗಳ ವರೆಗೆ ಪಶ್ಚಿಮ ದಿಕ್ಕಿನಿಂದ ಪ್ರತಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಪ್ರಬಲ ಬಿರುಗಾಳಿ ಬೀಸಲಿದ್ದು, ಸಮುದ್ರಕ್ಕೆ ಇಳಿಯದಂತೆ ಕೇರಳದ ಕರಾವಳಿ ತೀರದ ಮೀನುಗಾರಿರಿಗೆ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.