ADVERTISEMENT

ಕೊಳವೆ ಸೋರಿಕೆ: ಸಮುದ್ರ ಸೇರಿದ ಡೀಸೆಲ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಗಾಂಧಿನಗರ (ಐಎಎನ್‌ಎಸ್): ಇಂಧನ ಸಾಗಿಸುವ ಕೊಳವೆಯು ಒಡೆದುಹೋದ ಪರಿಣಾಮ ಸುಮಾರು ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡೀಸೆಲ್ ಸೋರಿಕೆಯಾಗಿ ಸಮುದ್ರಕ್ಕೆ ಸೇರಿದ ಘಟನೆ ಗುಜರಾತ್‌ನ ಕಛ್ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ.

ಹಲವು ದಿನಗಳ ಹಿಂದೆಯೇ ಕೊಳವೆ ಹಾನಿಗೊಳಗಾಗಿ ಡೀಸೆಲ್ ಸೋರಿಕೆಯಾಗುತ್ತಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಕೆ ನಂದಾ ಅವರು ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಗುಜರಾತ್ ಕಡಲತಡಿ ಮಂಡಲಿ ಮತ್ತು ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಲಿ (ಜಿಪಿಸಿಬಿ)ಗಳಿಗೆ ಸೂಚನೆ ನೀಡಿದ್ದಾರೆ.

ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪೆನಿಗೆ ಸೇರಿದ ಹಡಗು ಹೈ ಸ್ಪೀಡ್ ಡೀಸೆಲ್ ಅನ್ನು ಕೊಳವೆ ಮೂಲಕ ಪೂರೈಸುತ್ತಿದ್ದಾಗ ಕೊಳವೆ ಒಡೆದು ಸೋರಿಕೆಯಾಗಿದೆ. ಸುಮಾರು 1 ಲಕ್ಷ ಲೀಟರ್ ಡೀಸೆಲ್ ಸಮುದ್ರ ಪಾಲಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.