ADVERTISEMENT

ಖೋಟಾ ನೋಟು: ಆರೋಪಿ ಬಂಧನ

ಪಿಟಿಐ
Published 24 ಮೇ 2018, 19:09 IST
Last Updated 24 ಮೇ 2018, 19:09 IST

ಹೈದರಾಬಾದ್‌: ಖೋಟಾ ನೋಟು ಕಳ್ಳಸಾಗಣೆ ಜಾಲ ಪ್ರಕರಣದ ಪ್ರಮುಖ ಆರೋಪಿ ಸದ್ದಾಂ ಹುಸೇನ್‌ (23) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಈತನಿಂದ ₹26,000 ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳಲ್ಲಿ ರದ್ದುಗೊಂಡಿರುವ ₹1,000 ಮುಖ ಬೆಲೆಯ ಎರಡು ನೋಟುಗಳಿವೆ ಎಂದು ಎನ್‌ಐಎ ತಿಳಿಸಿದೆ.

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಕಲಿ ನೋಟುಗಳನ್ನು ಪಡೆಯುತ್ತಿದ್ದ ಈತ ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಚಲಾವಣೆ ನಡೆಸುತ್ತಿರುವ ಜಾಲದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿಸಿದೆ.

ADVERTISEMENT

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಸದ್ದಾಂ ಹೊಸೈನ್‌ ಎಂಬಾತನನ್ನು 2015ರಲ್ಲಿ ವಿಶಾಖಪಟ್ಟಣದಲ್ಲಿ ಬಂಧಿಸಿ, ಆತನಿಂದ ಸುಮಾರು ₹5.01 ಲಕ್ಷ ಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈತ ಸಹ ಇನ್ನೊಬ್ಬ ಪ್ರಮುಖ ಆರೋಪಿ ಅಮಿರುಲ್‌ ಹಖ್‌ ಎಂಬಾತನ ಸೂಚನೆ ಮೇರೆಗೆ ಮಾಲ್ಡಾದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.