
ಹೈದರಾಬಾದ್: ತೆಲುಗು ಚಿತ್ರ ರಂಗದ ಹಿರಿಯ ನಟ ಅಕ್ಕಿನೇನಿ ನಾಗೇಶ್ವರ ರಾವ್ (90) ಅವರು ಬುಧವಾರ ಬೆಳಗಿನ ಜಾವ 1.30ಕ್ಕೆ ಹೈದರಾಬಾದ್ ನ ಖಾಸಗಿ ನರ್ಸಿಂಗ್ ಹೋಂನಲ್ಲಿ ನಿಧನರಾದರು.
ಎ ಎನ್ ಆರ್ ಎಂದೇ ಪ್ರಸಿದ್ಧರಾಗಿದ್ದ ನಾಗೇಶ್ವರ ರಾವ್ ಅವರು ಸುಮಾರು 256 ಚಿತ್ರಗಳಲ್ಲಿ ಅಭಿನಯಿಸಿದ್ದರು. ಪ್ರತಿಷ್ಟಿತ ಪದ್ಮಭೂಷಣ, ದಾದಾ ಫಾಲ್ಕೆ ಪ್ರಶಸ್ತಿಗಳಿಗೆ ಪುರಸ್ಕೃತರಾಗಿದ್ದರು. ಕೆಲಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಅವರ ಪಾರ್ಥಿವ ಶರೀರವನ್ನು ಜೂಬ್ಲಿಹಿಲ್ಸ್ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ನಾಗೇಶ್ವರರಾವ್ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
ಅನ್ನಪೂರ್ಣ ಸ್ಪುಡಿಯೋದಲ್ಲಿ ಅಂತಿಮ ದರ್ಶನಕ್ಕೆ ಬೆಳಿಗ್ಗೆ 9.30 ರಿಂದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ನಾಗೇಶ್ವರರಾವ್ ಪುತ್ರ ನಾಗಾರ್ಜುನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.