ADVERTISEMENT

ಗಡಿ ರಕ್ಷಣೆಗೆ ಮಹಿಳಾ ಅಧಿಕಾರಿ

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಗಡಿ ರಕ್ಷಣೆಗೆ ಮಹಿಳಾ ಅಧಿಕಾರಿ
ಗಡಿ ರಕ್ಷಣೆಗೆ ಮಹಿಳಾ ಅಧಿಕಾರಿ   

ನವದೆಹಲಿ: ಯುದ್ಧದಸನ್ನಿವೇಶದಲ್ಲೂ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳುವುದಕ್ಕೆ ಇದೇ ಮೊದಲ ಬಾರಿ ಮಹಿಳಾ ಅಧಿಕಾರಿಯೊಬ್ಬರು ಸನ್ನದ್ಧರಾಗಿದ್ದಾರೆ.

ಇಂಡೊ ಟಿಬೆಟಿಯನ್‌ ಗಡಿ ಪೊಲೀಸ್‌ ಪಡೆಯ (ಐಟಿಬಿಪಿ) ಗಡಿ ಕಾವಲು ವಿಭಾಗದಲ್ಲಿ ಮೊದಲ ಅಧಿಕಾರಿಯಾಗಿ ಬಿಹಾರದ ಸಮಸ್ತಿಪುರ ಜಿಲ್ಲೆಯ ಪ್ರಕೃತಿ (25) ನೇಮಕಗೊಳ್ಳುವ ಮೂಲಕ ಈ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

2016ರಲ್ಲಿ ಅಧಿಕಾರಿಗಳ ನೇಮಕಾತಿಗಾಗಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಪ್ರಕೃತಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದರು.

ADVERTISEMENT

‘ಸೇನೆಯ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡಬೇಕು ಎನ್ನುವ ಬಯಕೆ ಇತ್ತು. ವಾಯು ಪಡೆಯಲ್ಲಿ ಕಾರ್ಯನಿರ್ವಹಿಸುವ ನನ್ನ ತಂದೆಯೇ ನನಗೆ ಸ್ಫೂರ್ತಿ
ಯಾಗಿದ್ದಾರೆ’ ಎಂದು ಪ್ರಕೃತಿ ತಿಳಿಸಿದ್ದಾರೆ.

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಪ್ರಕೃತಿ ಅವರು, ಶೀಘ್ರದಲ್ಲೇ ಡೆಹರಾಡೂನ್‌ನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ತೆರಳಲಿದ್ದಾರೆ.

ತರಬೇತಿ ಬಳಿಕ ಪ್ರಕೃತಿ ಅವರಿಗೆ ಅಸಿಸ್ಟಂಟ್‌ ಕಮಾಂಡಂಟ್‌ ಹುದ್ದೆ ದೊರೆಯಲಿದೆ. ನಂತರ ಗಡಿಯಲ್ಲಿ ಅವರುನಿಯೋಜನೆಗೊಳ್ಳಲಿದ್ದಾರೆ. ಪ್ರಸ್ತುತ 83 ಸಾವಿರ ಸಿಬ್ಬಂದಿ ಐಟಿಬಿಪಿಯಲ್ಲಿದ್ದು, ಕೇವಲ 1500 (ಶೇಕಡ 1.75)ರಷ್ಟು ಮಾತ್ರ ಮಹಿಳೆಯರಿದ್ದಾರೆ. ಮಹಿಳೆಯರಲ್ಲಿ ಬಹುತೇಕರು ಕಾನ್‌ಸ್ಟೆಬಲ್‌ ಹುದ್ದೆಯಲ್ಲಿದ್ದಾರೆ. ಕೆಲವರು ಮಾತ್ರ ಪಶುವೈದ್ಯಾಧಿಕಾರಿಯಂತಹ ಹುದ್ದೆಯಲ್ಲಿದ್ದಾರೆ. ಯುದ್ಧಕ್ಕೆ ನಿಯೋಜಿಸುವ ಅಧಿಕಾರಿಯ ಹುದ್ದೆಯಲ್ಲಿ ಇದುವರೆಗೆ ಯಾರೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣ: ಮಹಿಳಾ ಸಿಬ್ಬಂದಿಯೇ  ನಿರ್ವಹಣೆ
ಹೈದರಾಬಾದ್‌: ದಕ್ಷಿಣ ಕೇಂದ್ರ ವಲಯದ ಚಂದ್ರಗಿರಿ, ಬೇಗಂಪೇಟ್‌, ಫಿರಂಗಿಪುರಂ ರೈಲ್ವೆ ನಿಲ್ದಾಣವನ್ನು ಇಂದಿನಿಂದ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಣೆ ಮಾಡಲಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಸಬಲೀಕರಣ, ಅವರ ನೈತಿಕ ಮೌಲ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ದೃಷ್ಟಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನದಂದೇ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ. ಉಮಾಶಂಕರ್‌ ಕುಮಾರ್‌ ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ದೈನಂದಿನ ಕಾರ್ಯ, ಟಿಕೆಟ್‌ ವಿತರಣೆ, ಭದ್ರತೆ ಸೇರಿದಂತೆ ಎಲ್ಲಾ ಕಾರ್ಯವನ್ನು ಮಹಿಳಾ ಸಿಬ್ಬಂದಿಯೇ ನೋಡಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.